July 29, 2026
004

ಹಿರಿಯೂರು :

ಜೆಡಿ(ಯು) ಪಕ್ಷದ ಕರ್ನಾಟಕ ರಾಜ್ಯ ಕಾರ್ಯಕಾರಣಿ ನಿರ್ಣಯದಂತೆ ಪಕ್ಷದ ರಾಜ್ಯಾಧ್ಯಕ್ಷರಾದ ಶ್ರೀಮಹಿಮ ಜೆ. ಪಟೇಲ್ ಅವರ ಆದೇಶದ ಮೇರೆಗೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಜನಪ್ರಿಯ ಮುಖಂಡರು, ಬಬ್ಬೂರು ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷರಾದ ಶ್ರೀ.ಎಸ್.ಏಕಾಂತಪ್ಪ ಇವರನ್ನು ಹಿರಿಯೂರಿನ ಜೆಡಿ(ಯು) ತಾಲ್ಲೂಕು ಘಟಕದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.

ಈ ಕುರಿತು ನಗರದ ಸರ್ಕ್ಯೂಟ್ ಹೌಸ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆ.ವಿ.ಶಿವರಾಮ್ ರವರು ಚಿತ್ರದುರ್ಗದಿಂದ ಈ ಹಿಂದೆ ಜನತಾದಳ ಪಕ್ಷದ ಇತಿಹಾಸ ಸ್ಮರಿಸಿ ಚಿತ್ರದುರ್ಗದ ಜೆಡಿಯು ಸಂಸದರಾಗಿದ್ದ ಚಿತ್ರನಟ ಶಶಿಕುಮಾರ್ ಮತ್ತು ಅವಿಭಜಿತ ಜನತಾದಳದ ಸಂಸದ ಕೋದಂಡರಾಮಯ್ಯ ಹಿರಿಯೂರು ಶಾಸಕರಾಗಿದ್ದ ಮಂಜುನಾಥ್ ಅವರ ನಾಯಕತ್ವವನ್ನು ನೆನಪಿಸಿಕೊಳ್ಳಬೇಕು

ಈಗಲೂ ಭಾರತದಾದ್ಯಂತ ಅಸ್ತಿತ್ವದಲ್ಲಿರುವ ರಾಷ್ಟ್ರೀಯ ಪಕ್ಷ ಜೆಡಿ(ಯು) ತನ್ನ ಸೈದ್ಧಾಂತಿಕ ಬದ್ಧತೆಯಿಂದ ಹಿನ್ನಡೆಯಲ್ಲಿದ್ದರೂ ಅದು ತಾತ್ಕಾಲಿಕ, ರಾಜ್ಯದಲ್ಲಿ ಕನಿಷ್ಠ ಎಂಟರಷ್ಟು ಶೇಕಡಾ ಮತಗಳಿರುವ ಜೆಡಿ(ಯು) ನಿರ್ಣಾಯಕ ಪಾತ್ರವನ್ನು ವಹಿಸುತ್ತಿದೆ. ಈಗಿನ ಹಣ ಆಧಾರಿತ ರಾಜಕೀಯ ವ್ಯವಸ್ಥೆಯಿಂದ ರೋಸಿ ಹೋದ ಕಾರ್ಯಕರ್ತರು ಜೆಡಿ(ಯು) ಮತದಾರರು ಮತಗಟ್ಟೆಗೆ ಬರುತ್ತಿಲ್ಲ,

ಬರಲಿರುವ ಉಪಚುನಾವಣೆ ಮತ್ತು ಜಿಲ್ಲಾ, ತಾಲ್ಲೂಕು ಪಂಚಾಯತ್ ಚುನಾವಣೆಗಳ ಹಿನ್ನಲೆಯಲ್ಲಿ ಪಕ್ಷವನ್ನು ತಳಮಟ್ಟದಿಂದ ಪುನರ್ ಸಂಘಟನೆ ಮಾಡಬೇಕು, ಜನಾಧಾರಿತ ರಾಜಕಾರಣ ಮಾಡಲು ನೂತನ ತಾಲ್ಲೂಕು ಅಧ್ಯಕ್ಷರು ಶ್ರಮಿಸಬೇಕು ಎಂಬುದಾಗಿ ನೂತನ ಅಧ್ಯಕ್ಷರಾದ ಶ್ರೀ.ಎಸ್.ಏಕಾಂತಪ್ಪ ಸೂಚನೆ ನೀಡಿದರು.

ಈ ಪತ್ರಿಕಾಗೋಷ್ಠಿಯಲ್ಲಿ ಜೆಡಿ(ಯು) ರಾಜ್ಯ ಉಪಾಧ್ಯಕ್ಷರಾದ ಕೆ.ವಿ.ಶಿವರಾಮ್, ಜನ‌ ಪರಿವರ್ತನಾ ಅಭಿಯಾನದ ರಾಷ್ಟ್ರೀಯ ಅಧ್ಯಕ್ಷರಾದ ಶಿವರುದ್ರಯ್ಯಸ್ವಾಮಿ, ಜೆಡಿ(ಯು) ಪ್ರಧಾನ ಕಾರ್ಯದರ್ಶಿಗಳಾದ ಕೆ.ಆರ್ ರಂಗನಾಥ ಮತ್ತು ‌ನೂತನ‌ ಹಿರಿಯೂರು ತಾಲ್ಲೂಕಿನ ಅಧ್ಯಕ್ಷರಾದ ಎಸ್.ಏಕಾಂತಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *