
ಹಿರಿಯೂರು :
ನಗರದ ಒಂದು, ಎರಡು ಹಾಗೂ ಮೂರನೇ ವಾರ್ಡಿನ ಮಹಿಳೆಯರಿಗೆ ಆಷಾಡ ಮಾಸದ ಅಂಗವಾಗಿ ರಾಜಣ್ಣನವರ ಅಭಿಮಾನಿ ಬಳಗದ ವತಿಯಿಂದ “ರಂಗೋಲಿಸ್ಪರ್ಧೆ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ “ರಂಗೋಲಿಸ್ಪರ್ಧೆ”ಯಲ್ಲಿ ಪ್ರಥಮ, ದ್ವಿತೀಯ, ತೃತೀಯ, ಸ್ಥಾನವನ್ನು ಪಡೆದವರಿಗೆ ಬಹುಮಾನ ವಿತರಿಸಿದರಲ್ಲದೆ, ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಸಮಾಧಾನಕರ ಬಹುಮಾನವನ್ನು ನೀಡಲಾಯಿತು.

ಈ ಕಾರ್ಯಕ್ರಮದಲ್ಲಿ ವಿ.ವಿಶ್ವನಾಥ್, ಎ.ರಾಘವೇಂದ್ರ, ಮಿಲ್ಟ್ರಿರಾಜಣ್ಣ, ಚಂದ್ರಹಾಸ, ಮಂಜುಳಮ್ಮ, ಯೋಗೇಶ್, ಸ್ಟುಡಿಯೋ ಗೋವಿಂದ, ಸೇರಿದಂತೆ ಒಂದು, ಎರಡು, ಹಾಗೂ ಮೂರನೇ ವಾರ್ಡಿನ ಎಲ್ಲಾ ಮಹಿಳೆಯರು ಭಾಗವಹಿಸಿದ್ದರು.
