July 29, 2026
0002

ಹಿರಿಯೂರು :    

ಕುಂಚಿಟಿಗರ ಸಂಘಕ್ಕೆ 1 ಲಕ್ಷರೂಗಳ ದೇಣಿಗೆ ನೀಡಿದ ಜಿ.ಪಂ.ಮಾಜಿ ಅಧ್ಯಕ್ಷರಾದ  ಪಿಲಾಜನಹಳ್ಳಿ ಜಯಣ್ಣನವರಿಗೆ ಅಭಿನಂದನೆಗಳು, ಇವರ ಈ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದ್ದು, ಬೇರೆಯವರಿಗೆ ಮಾದರಿಯಾಗಲಿದೆ ಎಂಬುದಾಗಿ ಸಾಮಾಜಿಕ ಕಾರ್ಯಕರ್ತ ಕಸವನಹಳ್ಳಿರಮೇಶ್ ಹೇಳಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಪಿಲಾಜನಹಳ್ಳಿ ಜಯಣ್ಣನವರಿಂದ ಕುಂಚಿಟಿಗ ಸಂಘದ “ಮಕ್ಕಳ ಪ್ರತಿಭಾ ಪುರಸ್ಕಾರ” ಕಾರ್ಯಕ್ರಮಕ್ಕೆ ಒಂದು ಲಕ್ಷ ರೂಗಳ ದೇಣಿಗೆಯನ್ನು ಸ್ವೀಕರಿಸಿ, ನಂತರ ಅವರು ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಪಿಲಾಜನಹಳ್ಳಿ ಜಯಣ್ಣ ಮಾತನಾಡಿ, ಕುಂಚಿಟಿಗ ಸಂಘದ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಪ್ರತಿ ವರ್ಷ ದೇಣಿಗೆ ಕ್ರೂಡೀಕರಣ ಮಾಡುವುದಕ್ಕಿಂತ ಒಂದು ಲಕ್ಷ ರೂಗಳ ಡಿಪಾಸಿಟ್ ಮಾಡಿದರೆ. ಅದರ ಬಡ್ಡಿಯಲ್ಲಿ ಪ್ರತಿ ವರ್ಷ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಮಾಡಬಹುದೆಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂಬುದಾಗಿ ಹೇಳಿದರು.

ಈ ಮೊದಲು ಕಳೆದ ವರ್ಷ ನಮ್ಮ ಸಮಾಜದ ಬಾಂಧವರು ಹಾಗೂ ಹಿರಿಯಪತ್ರಕರ್ತರಾದ ಶ್ರೀಯುತ ಆಲೂರುಹನುಮಂತರಾಯಪ್ಪನವರು 1ಲಕ್ಷ ರೂಗಳನ್ನು ಈಗಾಗಲೇ ಸಂಘಕ್ಕೆ ದೇಣಿಗೆಯಾಗಿ ನೀಡಲಾಗಿದ್ದು, ಇದು ನಮ್ಮ ಸಮಾಜದ ಬಾಂಧವರಿಗೆ ಒಂದು ಪ್ರೇರಣೆಯಾಗಿದೆ, ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಈ ರೀತಿ ದೇಣಿಗೆ ನೀಡುವ ಮೂಲಕ ನಮ್ಮ ಕುಂಚಿಟಿಗರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಕ್ರಮಗಳಿಗೆ ಬೆಂಬಲವಾಗಿ ನಿಲ್ಲಲಿ ಎಂಬುದಾಗಿ ಕಸವನಹಳ್ಳಿರಮೇಶ್ ಆಶಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕುಂಚಿಟಿಗರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಕುಬೇರಪ್ಪ, ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಪಿಟ್ಲಾಲಿಕರಿಯಣ್ಣ, ಹುಲಗಲಕುಂಟೆಗಿರೀಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *