
ಹಿರಿಯೂರು :
ಕಾಂಗ್ರೆಸ್ ಪಕ್ಷವು ನುಡಿದಂತೆ ನಡೆಯುವ ಪಕ್ಷವಾಗಿದ್ದು, ನಮ್ಮ ಕಾಂಗ್ರೆಸ್ ಪಕ್ಷ ಅಧಿಕಾರ ವಹಿಸಿಕೊಂಡ ನಂತರ ಚುನಾವಣೆ ಪೂರ್ವದಲ್ಲಿ ಹೇಳಿದ 5 ಗ್ಯಾರೆಂಟಿಗಳಾದ ಶಕ್ತಿಯೋಜನೆ, ಗೃಹಲಕ್ಷ್ಮಿ, ಗೃಹಜ್ಯೋತಿ, ಯುವನಿಧಿ, ಸೇರಿದಂತೆ ಎಲ್ಲವನ್ನೂ ಜಾರಿಗೆ ತರುವ ಮೂಲಕ ನಮ್ಮ ಜನರ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ ಎಂಬುದಾಗಿ ಕರ್ನಾಟಕ ರಾಜ್ಯ ಕಾಂಗ್ರೆಸ್ ಪಕ್ಷ ಉಪಾಧ್ಯಕ್ಷರಾದ ಆರ್.ಮಂಜುನಾಥ್ ಹೇಳಿದರು.
ತಾಲ್ಲೂಕಿನ ಬ್ಯಾಡರಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಕರೆಯಲಾಗಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯ ಅಧ್ಯಕ್ಷತೆಯನ್ನು ವಹಿಸಿ, ನಂತರ ಅವರು ಮಾತನಾಡಿದರು.

ಈ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಪಿ.ಎಸ್.ಸಾದತ್ ವುಲ್ಲಾ, ಹಿರಿಯ ಕಾಂಗ್ರೆಸ್ಸಿಗರಾದ ಡಾ.ಕೆ.ಟಿ.ಪ್ರಕಾಶ್, ಶಿವಣ್ಣ, ಪ್ರಸನ್ನ, ಓಬಳೇಶ್, ದಾದಾಪೀರ್, ದ್ರುವ, ಪದ್ಮನಾಭ, ಧನಂಜಯಕುಮಾರ್ ಸೇರಿದಂತೆ ಇತರೆ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು. ಶೇಖರಪ್ಪ, ಕುಮಾರ್, ಜಗನ್ನಾಥ್, ಮಮತಾ, ಶಾಂತಲಾ, ಕವಿತಾ ಹಲವಾರು ಗ್ರಾಮಸ್ಥರು ಹಾಜರಿದ್ದರು.
