
ಹಿರಿಯೂರು :
ನಗರದ ಆರ್.ಬಿ.ಎನ್ ಮೆಮೋರಿಯಲ್ ಶಾಲೆ ವೇದಾವತಿ ನಗರ ಈ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಕಡ 100 ರಷ್ಟು ಫಲಿತಾಂಶ ಬಂದಿದ್ದು, ಒಟ್ಟು 21 ವಿದ್ಯಾರ್ಥಿಗಳಲ್ಲಿ 16 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, ಉಳಿದ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂಬುದಾಗಿ ಆರ್.ಬಿ.ಎನ್ ಮೆಮೋರಿಯಲ್ ಶಾಲೆ ಅಧ್ಯಕ್ಷರಾದ ಖಂಡೇನಹಳ್ಳಿಹನುಮಂತರಾಯಪ್ಪ ತಿಳಿಸಿದ್ದಾರೆ.
ಸಪ್ನ ಎಂಬ ವಿದ್ಯಾರ್ಥಿಯು ಶೇ.94.5 ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿರುತ್ತಾರೆ, ಈ ಮಕ್ಕಳ ಸಾಧನೆಗೆ ಆಡಳಿತ ಮಂಡಳಿಯವರು ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕವೃಂದದವರಿಗೆ ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.ಆರ್.ಬಿ.ಎಂ ಮೆಮೊರಿಯಲ್ ಶಾಲೆ ಅಧ್ಯಕ್ಷರಾದ ಖಂಡೇನಹಳ್ಳಿ ಹನುಮಂತರಾಯಪ್ಪ ಮತ್ತು ಆಡಳಿತ ಮಂಡಳಿಯವರು, ಶಿಕ್ಷಕರು ಅಭಿನಂದಿಸಿದ್ದಾರೆ.
