
ಹಿರಿಯೂರು :
ಗೋ ಸಮ್ಮಾನ ಆಹ್ವಾನ ಅಭಿಯಾನದ ಅಡಿಯಲ್ಲಿ ಮೂಲಕ ಗೋವನ್ನು ರಾಷ್ಟ್ರೀಯ ಪ್ರಾಣಿ ಮಾಡಬೇಕು ಮತ್ತು ಗೋಹತ್ಯೆ ಸಂಪೂರ್ಣ ನಿಷೇಧವಾಗಬೇಕೆಂಬ ಉದ್ದೇಶದಿಂದ ರಾಷ್ಟ್ರಾದ್ಯಂತ ಅಭಿಯಾನ ನಡೆಯುತ್ತಿದ್ದು, ಈ ಕೂಡಲೇ ಸರ್ಕಾರ ಗೋಹತ್ಯೆ ಸಂಪೂರ್ಣ ನಿಷೇಧ ಮಾಡಬೇಕು ಎಂಬುದಾಗಿ ವಿಶ್ವ ಹಿಂದೂ ಪರಿಷತ್ ಭಜರಂಗದಳ ಕಾರ್ಯಕರ್ತರುಗಳು ಆಗ್ರಹಿಸಿದ್ದಾರೆ.
ನಗರದ ಗಾಂಧಿ ವೃತ್ತದಿಂದ ಜಾತ ಹೊರಟು ಬೈಕ್ ರ್ಯಾಲಿ ಮುಖಾಂತರ ಗೋ ಸಮ್ಮಾನ ಆಹ್ವಾನ ಅಭಿಯಾನದ ಮೂಲಕ ಗೋವನ್ನು ರಾಷ್ಟ್ರೀಯ ಪ್ರಾಣಿ ಮಾಡಬೇಕು ಮತ್ತು ಗೋಹತ್ಯೆ ಸಂಪೂರ್ಣ ನಿಷೇಧವಾಗಬೇಕೆಂದು ಒತ್ತಾಯಿಸಿ, ತಾಲ್ಲೂಕು ತಹಶೀಲ್ದಾರರ ಮುಖಾಂತರ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಿ, ನಂತರ ಅವರು ಮಾತನಾಡಿದರು.
ಈ ರ್ಯಾಲಿಯಲ್ಲಿ ಹರೀಶ್, ಶ್ರೀನಿವಾಸ್, ಪ್ರಭಾಕರ್, ತಿಪ್ಪೇಸ್ವಾಮಿ, ಚೇತನ್,ರಾಘವೇಂದ್ರ, ನವೀನ್,ವಿಶ್ವನಾಥ್, ಶ್ರವಣ್ ಸಿಂಗ್, ಗೋವಿಂದ್ ಸಿಂಗ್, ಭವರ್ ಸಿಂಗ್,, ವೆಂಕಟೇಶ್, ಮೋಹನ್ ಸಿಂಗ್, ಸನ್ ಶೇಖರ್. ಚಂದ್ರ ಕೀರ್ತಿ ಗುಜ್ಜಾರ್ ಗೋ ಭಕ್ತರೆಲ್ಲರು ಆಗಮಿಸಿ ಅಭಿಯಾನಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದರು.
