April 28, 2026
002

ಹಿರಿಯೂರು :

ಕುಂಚಿಟಿಗರ ಸಮುದಾಯದಿಂದ 2025-26 ನೇ ಸಾಲಿನ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ  ಶೇಕಡ 80ಕ್ಕೂ ಹೆಚ್ಚು ಅಂಕಗಳನ್ನು ಪಡೆದ ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯ ಕುಂಚಿಟಿಗ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಅರ್ಹ ವಿದ್ಯಾರ್ಥಿಗಳು ಸೂಕ್ತ ದಾಖಲೆಗಳನ್ನು ಸಲ್ಲಿಸಿ, ತಮ್ಮ ಹೆಸರು ನೊಂದಣಿ ಮಾಡಬಹುದು ಎಂಬುದಾಗಿ ಕುಂಚಿಟಿಗರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರಾದ ಪ್ರೊ.ಮೈಸೂರುಶಿವಣ್ಣ ಹೇಳಿದರು.

ನಗರದ ಕುಂಚಿಟಿಗರ ಸಂಘದ ಕಚೇರಿಯಲ್ಲಿ ಕುಂಚಿಟಿಗ ಸಮುದಾಯದ ವತಿಯಿಂದ ಪದಾಧಿಕಾರಿಗಳಿಗೆ ಕರೆಯಲಾಗಿದ್ದ ಸಭೆಯನ್ನು ಉದ್ದೇಶಿಸಿ, ಅವರು ಮಾತನಾಡಿದರು.

ವಿದ್ಯಾರ್ಥಿಗಳು ತಮ್ಮ ಅರ್ಜಿಗಳನ್ನು ತಮ್ಮ ಅಂಕಪಟ್ಟಿ, ಆಧಾರ್ ಕಾರ್ಡ್, ಜಾತಿ ಸರ್ಟಿಫಿಕೇಟ್, ಎರಡು ಫೋಟೋಗಳೊಂದಿಗೆ ನಗರದ ಹುಳಿಯಾರ್ ರಸ್ತೆಯಿಂದ ಶ್ರೀಶೈಲ ಟಾಕೀಸ್ ಕಡೆಗೆ ಇರುವ ರೇಣುಕಾ ಆಪ್ಟಿಕಲ್ಸ್ ಇಲ್ಲಿ ಸಲ್ಲಿಸಬಹುದಾಗಿದ್ದು, ಅರ್ಹ ವಿದ್ಯಾರ್ಥಿಗಳು ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಬಹುದಾಗಿದೆ.

ಅರ್ಜಿ ಸಲ್ಲಿಸಲು ಮೇ 12 ಅಂತಿಮ ದಿನಾಂಕವಾಗಿರುತ್ತದೆ. ನಂತರ ಬಂದ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ, ಹೆಚ್ಚಿನ ಮಾಹಿತಿಗೆ ಕುಂಚಿಟಿಗರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ಜಿ.ಹನುಮಂತರಾಯ 9880260161 ಈ ಮೊಬೈಲ್ ನಂಬರ್ ಗೆ ಸಂಪರ್ಕಿಸಬಹುದಾಗಿದೆ ಎಂಬುದಾಗಿ ತಿಳಿಸಿದರು.

ಈ ಸಭೆಯಲ್ಲಿ ಕುಂಚಿಟಿಗರ ಒಕ್ಕೂಟದ ಅಧ್ಯಕ್ಷರಾದ ಕಸವನಹಳ್ಳಿ ರಮೇಶ್, ಪ್ರಧಾನ ಕಾರ್ಯದರ್ಶಿ ಕೆ.ಜಿ.ಹನುಮಂತರಾಯ. ಉಪಾಧ್ಯಕ್ಷ ಮಲ್ಲಪ್ಪನಹಳ್ಳಿಜೋಗೇಶ್, ಕುಂಚಿಟಿಗರ ಸಂಘದ ಜಿಲ್ಲಾ ಮುಖಂಡ ಕುಬೇರಪ್ಪ, ಖಜಾಂಚಿ ಕಾತ್ರಿಕೇನಳ್ಳಿ ಮಂಜುನಾಥ್, ಆಪ್ಟಿಕಲ್ಸ್ ರಾಜೇಶ್, ಮಹಿಳಾ ಅಧ್ಯಕ್ಷೆ ಶಶಿಕಲಾ, ಯುವ ರೈತ ಸಂಘದ ಅಧ್ಯಕ್ಷ ಚೇತನ್ ಯಳನಾಡು, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *