
ಹಿರಿಯೂರು :
ಜ್ಯೋತಿ ಬೆಳಗುವಾಗ ಊರ್ದ್ವ ಮುಖವಾಗಿ ಅಲುಗಾಡದೆ ಉರಿಯುತ್ತದೆ ಗಾಳಿ ಬಂದಾಗ ಅತ್ತ ಇತ್ತ ಅಲುಗಾಡುತ್ತದೆ, ಮತ್ತೆ ಅದು ಉರ್ದುಮುಖವಾಗಿ ಉರಿಯಲು ಪ್ರಯತ್ನಿಸುತ್ತದೆ ಹಾಗೆಯೇ ನಾವುಗಳು ಸಹ ನಮ್ಮ ಮನಸ್ಸಿನ ಚಂಚಲತೆಯನ್ನು ಅತ್ತಇತ್ತ ಯೋಚನೆಗೆ ಬಿಡದೆ ಏಕಾಗ್ರತೆಯಲ್ಲಿ ಕಾಪಾಡಿಕೊಳ್ಳಬೇಕು ಎಂಬುದಾಗಿ ಬೆಂಗಳೂರು ಗುರುಪೀಠ ಆರ್ಯವೈಶ್ಯ ಕುಲಗುರುಗಳಾದ ಶ್ರೀಶ್ರೀಸಚ್ಚಿತಾನಂದ ಸರಸ್ವತಿಸ್ವಾಮೀಜಿ ಹೇಳಿದರು.

ನಗರದ ಶ್ರೀಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ವಾಸವಿ ಜಯಂತಿ ಪ್ರಯುಕ್ತ ಗೋಪುರ ಪುನರ್ ಕಲಶ ಸ್ಥಾಪನೆ, ಮಹಾಕುಂಭಾಭಿಷೇಕ ಮಹೋತ್ಸವ, ನವಚಂಡಿಕಾಹೋಮ ಕಾರ್ಯಕ್ರಮಗಳಲ್ಲಿ ಆರ್ಯವೈಶ್ಯ ಸಮಾಜದವರಿಗೆ ಪ್ರವಚನ ನೀಡಿ, ಅವರು ಮಾತನಾಡಿದರು.
ಮನಸ್ಸಿನ ಚಂಚಲತೆಯನ್ನು ದೇವರ ಪ್ರಾರ್ಥನೆಯಲ್ಲಿ ಮಗ್ನಗೊಳಿಸಿದರೆ ಮನಸ್ಸು ಸ್ಥಿರವಾಗಿರುತ್ತದೆ, ಮನುಷ್ಯರು ಎಷ್ಟೇ ದೇವಸ್ಥಾನಗಳ ದರ್ಶನ ಮಾಡಿದರು ಸಹ ಮತ್ತು ಕೋಟ್ಯಾಧಿಪತಿಯಾಗಿದ್ದರೂ ಸಹ ತೃಪ್ತಿ ಸಿಗುವುದಿಲ್ಲ, ನಮ್ಮ ಮನಸ್ಸಿನೊಳಗೆ ದೇವರ ಪ್ರಾರ್ಥನೆಯಲ್ಲಿ ತೊಡಗಿದರೆ ತೃಪ್ತಿ ದೊರೆಯುತ್ತದೆ ಎಂಬುದಾಗಿ ಹೇಳಿದರು.
ಪುಟ್ಟ ಮಕ್ಕಳ ಅಕ್ಷರ ಅಭ್ಯಾಸದಲ್ಲಿ ಅವರುಗಳಿಗೆ ಓಂಕಾರವನ್ನು ಬರೆಸಿ ಆಶೀರ್ವಾದ ಮಾಡಿದರು, ಬಾಲನಾಗರಪೂಜೆಯಲ್ಲಿದ್ದ ಮಕ್ಕಳಿಗೆ ಆಶೀರ್ವಾದ ಮಾಡಿ ಶುಭಹಾರೈಸಿದರು. ವಾಸವಿ ಜಯಂತಿ ಪ್ರಯುಕ್ತ ಹಮ್ಮಿಕೊಂಡಿರುವ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಲಿ ಎಂಬುದಾಗಿ ಶುಭ ಹಾರೈಸಿದರು.

ಆರ್ಯವೈಶ್ಯ ಮಂಡಳಿ ಅಧ್ಯಕ್ಷರಾದ ಕೆ.ವಿ.ಸತ್ಯನಾರಾಯಣ ಮಾತನಾಡಿ, ನವಚಂಡಿಕಾ ಹೋಮವನ್ನು ಲೋಕ ಕಲ್ಯಾಣಕ್ಕಾಗಿ, ಸಕಲ ಜೀವರಾಶಿಗಳ ಸಂರಕ್ಷಣೆಗಾಗಿ, ಮಳೆ ಬೆಳೆ ಸಮೃದ್ಧಿಗಾಗಿ ಜನರ ಆರೋಗ್ಯ ಐಶ್ವರ್ ಐಶ್ವರ್ಯ ದೊರೆಯಬೇಕೆಂಬ ಉದ್ದೇಶದಿಂದ ಮಾಡಲಾಗುತ್ತಿದೆ ಎಂಬುದಾಗಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ಆರ್ಯವೈಶ್ಯ ಮಂಡಳಿ ಅಧ್ಯಕ್ಷರು ಮತ್ತು ಎಲ್ಲಾ ಅಂಗಸಂಸ್ಥೆಗಳ ಪದಾಧಿಕಾರಿಗಳು, ಆರ್ಯವೈಶ್ಯ ಸಮಾಜದ ಕುಲಬಾಂಧವರು, ಚಂಡಿಕಾ ಹೋಮದಲ್ಲಿ ನಡೆಸಿಕೊಟ್ಟು ವೇದಬ್ರಹ್ಮ ಶ್ರೀವೇಣುಗೋಪಾಲಶರ್ಮ ಮತ್ತು ತಂಡದವರು ಉಪಸ್ಥಿತರಿದ್ದರು.
