November 5, 2026
9-

:

ನಮ್ಮ ಕಾಂಗ್ರೆಸ್ ಸರ್ಕಾರವು 5ಗ್ಯಾರೆಂಟಿಗಳನ್ನು ಜಾರಿಗೆ ತರುವ ಮೂಲಕ ನುಡಿದಂತೆ ನಡೆದಿರುವ ಸರ್ಕಾರವಾಗಿದ್ದು, ಇನ್ನು ಮುಂದೆಯೂ ಹಿರಿಯೂರಿನಲ್ಲಿ ರಸ್ತೆ, ನೀರಾವರಿ, ಬಡಕುಟುಂಬಗಳಿಗೆ ಸೈಟ್ ಸೇರಿದಂತೆ ಹಲವು ಜನಪರ ಯೋಜನೆಗಳನ್ನು ರೂಪಿಸಿದ್ದು, ಈ ಯೋಜನೆಗಳು ಕಾರ್ಯರೂಪಕ್ಕೆ ಬರಲು ನಮ್ಮ ಪಕ್ಷಕ್ಕೆ ನೀವು ಶಕ್ತಿ ತುಂಬುವ ಕೆಲಸ ಮಾಡಬೇಕು ಎಂಬುದಾಗಿ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಹೇಳಿದರು.

ನಗರದ ನಂಜಯ್ಯನ ಕೊಟ್ಟಿಗೆಯಲ್ಲಿ ಒಕ್ಕಲಿಗರ ಸಮುದಾಯದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸುಮಾರು 15 ಕೋಟಿ ರೂಗಳ ವೆಚ್ಚದ ಒಕ್ಕಲಿಗರ ಸಮುದಾಯ ಭವನದ ಶಂಕುಸ್ಥಾಪನೆಯನ್ನು ನೆರವೇರಿಸಿ, ನಂತರ ಅವರು ಮಾತನಾಡಿದರು.

ನಮ್ಮ ಕಾಂಗ್ರೆಸ್ ಸರ್ಕಾರ ಎಲ್ಲಾ ಜಾತಿ ಜನಾಂಗವನ್ನು ಸಮಾನವಾಗಿ ಕಾಣುವ ಸರ್ಕಾರವಾಗಿದ್ದು, ಸರ್ವರಿಗೂ ಸಮಾನ ಅವಕಾಶಗಳನ್ನು ನೀಡುತ್ತದೆ, ನಾವು ಈಗಾಗಲೇ ಒಕ್ಕಲಿಗರ ಸಮುದಾಯ ಭವನಕ್ಕೆ 5 ಕೋಟಿ ರೂಗಳ ಅನುದಾನಕ್ಕೆ ಮಂಜೂರಾತಿ ನೀಡಿದ್ದೇವೆ, ಮುಂದಿನ ದಿನಗಳಲ್ಲಿ ಗೊಲ್ಲರ ಸಮುದಾಯ ಭವನ, ಪರಿಶಿಷ್ಟಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು, ಕನಕ ಭವನಕ್ಕೂ ಅನುದಾನ ನೀಡಲಾಗುವುದು ಎಂದರಲ್ಲದೆ,

ಅಧಿಕಾರ ಎಲ್ಲರಿಗೂ ಸಿಗುತ್ತದೆ, ಆದರೆ ಅಧಿಕಾರ ಪಡೆದವರು ಜನಸೇವೆಯಂತ ಸಾಧನೆಯತ್ತ ಗಮನಹರಿಸಬೇಕು, ಈ ನಿಟ್ಟಿನಲ್ಲಿ ನನ್ನ ಸ್ನೇಹಿತ ಡಿ.ಸುಧಾಕರ್ ರವರ ಕನಸಿನಂತೆ ಈ ಕ್ಷೇತ್ರವನ್ನು ಎಲ್ಲಾ ರಂಗದಲ್ಲಿ ಅಭಿವೃದ್ಧಿ ಪಡಿಸುವ ನಮ್ಮ ಯೋಜನೆಗೆ ನಿಮ್ಮ ಬೆಂಬಲದ ಅಗತ್ಯವಿದ್ದು, ಮುಂಬರುವ ಉಪಚುನಾವಣೆ ಅಭ್ಯರ್ಥಿ ನಾನೇ ಎಂದು ತಿಳಿದು ನನ್ನ ಮೇಲೆ ನಂಬಿಕೆಯಿಟ್ಟು ಮತಹಾಕಿ ನಿಮ್ಮ ಸೇವೆ ಮಾಡಲು ಅವಕಾಶ ನೀಡಬೇಕು ಎಂಬುದಾಗಿ ಹೇಳಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ಶ್ರೀನಂಜಾವದೂತ ಸ್ವಾಮೀಜಿಯವರು ಮಾತನಾಡಿ, ಯಾವುದೇ ಕೆಲಸವನ್ನು ಸಾಧಿಸುವ ಛಲವಿರುವುದು ನಮ್ಮ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ರವರಿಗೆ ಮಾತ್ರ.ಅವರಿಗೆ ಎಲ್ಲಾ ಸಮುದಾಯಗಳನ್ನು ಸಮಾನತೆಯಿಂದ ಕಾಣುವ ಮನೋಭಾವ ಹೊಂದಿದ್ದು, ಸರ್ವಜನಾಂಗದ ಏಳಿಗೆಗೆ ಶ್ರಮಿಸುವ ಧೀಮಂತ ನಾಯಕರಾಗಿದ್ದಾರೆ, ಒಕ್ಕಲಿಗರ ಸಮುದಾಯ ಭವನಕ್ಕೆ  5ಕೋಟಿ ರೂಗಳನ್ನು ಸರ್ಕಾರದಿಂದ ಅನುದಾನವಾಗಿ ನೀಡಿದ್ದು, ಅವರಿಗೆ ನಮ್ಮ ಸಮುದಾಯದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂಬುದಾಗಿ ಹೇಳಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ರಾಮಚಂದ್ರಪ್ಪ ವಹಿಸಿದ್ದರು. ಕಾರ್ಯಕ್ರಮದಲ್ಲಿ ತಾಲ್ಲೂಕು ಒಕ್ಕಲಿಗರ ಸಂಘದ ಕಾರ್ಯದರ್ಶಿ ಏಕಾಂತಪ್ಪ, ಪರಿಶಿಷ್ಟ ವರ್ಗಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಟಿ.ರಘುಮೂರ್ತಿ, ಪೌರಾಡಳಿತ ಸಚಿವ ಸಿ.ಬಾಲಕೃಷ್ಣ, ಸಮಾಜ ಕಲ್ಯಾಣ ಸಚಿವ ಕೆ.ಎಚ್.ಮುನಿಯಪ್ಪ, ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಖಂಡ್ರೆ, ಸಣ್ಣ ನೀರಾವರಿ ಸಚಿವ ಅಜಯ್ ಸಿಂಗ್, ಮುಜರಾಯಿ ಖಾತೆ ಸಚಿವ ಬಸವಂತಪ್ಪ, ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಹಾಗೂ ಶಿರಾ ಶಾಸಕ ಟಿ.ಬಿ.ಜಯಚಂದ್ರ, ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಹಾಗೂ ಎಂ.ಎಲ್.ಸಿ ಡಿ.ಟಿ.ಶ್ರೀನಿವಾಸ್, ಮಾಜಿಸಚಿವ ಹೆಚ್.ಆಂಜನೇಯ, ಶಾಸಕ ಕೆ.ಸಿ.ವೀರೇಂದ್ರಪಪ್ಪಿ, ಕೆಪಿಸಿಸಿ ಸದಸ್ಯ ಗನ್ನಾಯಕನಹಳ್ಳಿ ಮಂಜುನಾಥ್, ಜಿ.ಪಂ.ಮಾಜಿಸದಸ್ಯ ನಾಗೇಂದ್ರನಾಯ್ಕ, ಕಾಂಗ್ರೆಸ್ ಮುಖಂಡರುಗಳಾದ ಖಾದಿರಮೇಶ್, ಈರಲಿಂಗೇಗೌಡ, ಸುಹಾಸ್ ಸುಧಾಕರ್, ತಾಲ್ಲೂಕು ಒಕ್ಕಲಿಗರ ಮಹಿಳಾ ಘಟಕದ ಅಧ್ಯಕ್ಷರಾದ ಮಮತಾಗೌಡ,  ಮಾನಸಮಂಜುನಾಥ್, ರಮ್ಯಾರಾಜು, ಸೇರಿದಂತೆ ಹಾಗೂ ತಾಲ್ಲೂಕು ಒಕ್ಕಲಿಗರ ಸಂಘದ ಪದಾಧಿಕಾರಿಗಳು, ನಿರ್ದೇಶಕರುಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *