October 28, 2026
003

ಹಿರಿಯೂರು :

ದಿವಂಗತ ಡಿ.ಸುಧಾಕರ್ ನಿಧನದಿಂದ ತೆರವಾಗಿರುವ ಹಿರಿಯೂರು ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆ ಹಾಗೂ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಗಳು 2028ರ ಸಾರ್ವತ್ರಿಕ ಚುನಾವಣೆಗೆ ದಿಕ್ಸೂಚಿಯಾಗಲಿವೆ ಎಂಬುದಾಗಿ ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷರಾದ ಶಂಕರಮೂರ್ತಿ ಹೇಳಿದರು.

ತಾಲ್ಲೂಕಿನ ಹೊಸಯಳನಾಡು ಗ್ರಾಮದಲ್ಲಿ ಭಾನುವಾರ ಆಗ್ನೇಯ ಪದವೀಧರ ಕ್ಷೇತ್ರದ ಎನ್.ಡಿ.ಎ ಅಭ್ಯರ್ಥಿ ಕೆ.ಎಂ.ಸುರೇಶ್ ರವರ ಪರವಾಗಿ ಪಕ್ಷದ ಮುಖಂಡರೊಂದಿಗೆ ಮತಯಾಚಿಸಿ,ನಂತರ ಅವರು ಮಾತನಾಡಿದರು.

ಮೂರು ವರ್ಷದಿಂದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಯ ಜಪ ಮಾಡುತ್ತಾ ಅಭಿವೃದ್ಧಿ ಶೂನ್ಯವಾಗಿದೆ, ಗೃಹಲಕ್ಷ್ಮಿ ಹಣವನ್ನು ಸಹ ಪ್ರತಿ ತಿಂಗಳು ಹಾಕುತ್ತಿಲ್ಲ, ಈಗಲೂ ಮೂರು ತಿಂಗಳ ಹಣ ಬಾಕಿ ಉಳಿಸಿಕೊಂಡಿದ್ದಾರೆ, ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದ ಜೊತೆಗೆ ಹಾದಿಬೀದಿಯಲ್ಲಿ ಮಾನಹರಾಜು ಹಾಕುವಂತಹ ಸ್ಪ್ರಿಂಗ್ ಕಾರ್ಯಾಚರಣೆಯಲ್ಲಿ ತೊಡಗಿರುವುದು ನಾಚಿಕೆಗೇಡು

ಕಾಂಗ್ರೆಸ್ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂಬುದಕ್ಕೆ ಆರ್ಥಿಕ ಇಲಾಖೆ ಬರೆದ ಪತ್ರವೇ ನಿದರ್ಶನವಾಗಿದ್ದು, ಪದವೀಧರರು ಇದನ್ನೆಲ್ಲ ನೆನಪಿನಲ್ಲಿಟ್ಟುಕೊಂಡು ಎನ್.ಡಿ.ಎ ಅಭ್ಯರ್ಥಿ ಕೆ.ಎಂ.ಸುರೇಶ್ ರವರನ್ನು ಮೊದಲ ಪ್ರಾಶಸ್ತ್ಯದ ಮತ ಹಾಕುವ ಮೂಲಕ ಕೆ.ಎಂ.ಸುರೇಶ್ ರವರ ಗೆಲುವಿಗೆ ಸಹಕರಿಸಬೇಕು ಎಂಬುದಾಗಿ ಮನವಿ ಮಾಡಿದರು.

ಶಾಸಕ ಚಂದ್ರಪ್ಪ ಮಾತನಾಡಿ, ರಾಜ್ಯದಲ್ಲಿ ಬರಗಾಲದಿಂದಾಗಿ ಜನರು ಕುಡಿಯುವ ನೀರಿಗೂ ಪರದಾಡುತ್ತಿದ್ದು, ಕೂಲಿ ಸಿಗದೇ ನಗರಗಳತ್ತ ಬಹಳ ಜನ ವಲಸೆ ಹೋಗುತ್ತಿದ್ದಾರೆ, ರೈತರು ಕೂಲಿಕಾರ್ಮಿಕರ ನೆರವಿಗೆ ನಿಲ್ಲಬೇಕಿದ್ದ ಸರ್ಕಾರ ಕಣ್ಣಿದ್ದು ಕುರುಡಾಗಿದೆ ಆದ್ದರಿಂದ ಪದವೀಧರರು ಮತದಾರರು ಜಾಗೃತರಾಗಿ ಎನ್.ಡಿ.ಎ ಅಭ್ಯರ್ಥಿಗೆ ಮತ ನೀಡಬೇಕು ಎಂಬುದಾಗಿ ಹೇಳಿದರು

ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಎಂ.ರವೀಂದ್ರಪ್ಪ, ಡಿ.ಯಶೋಧರ, ಎಂ ಜಯಣ್ಣ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಮಂಜುನಾಥ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ತಾಲೂಕು ಘಟಕದ ಅಧ್ಯಕ್ಷ ಕೆ.ಅಭಿನಂದನ್, ಮುಖಂಡರಾದ ಮುರುಳಿ, ಜೆ.ಬಿ.ರಾಜಣ್ಣ ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *