
ಹಿರಿಯೂರು :
ರೈತಪರ ಸಂಘಟನೆಗಳ ಮೂಲಕ ರೈತರ ಹಿತರಕ್ಷಣೆಗಾಗಿ ಸದಾ ಹೋರಾಟ ಮಾಡುವ ಮೂಲಕ ರೈತರ ಬೆನ್ನೆಲುಬಾಗಿ ನಿಂತು ರೈತಸಂಘ ಹಾಗೂ ಹಸಿರುಸೇನೆಯ ಜಿಲ್ಲಾಧ್ಯಕ್ಷರಾಗಿ, ರೈತಪರ ಹೋರಾಟಗಾರರಾಗಿ ಸದಾ ಸಮಾಜಕ್ಕೆ ನೆರವಾಗುತ್ತಾ ಬಂದಿರುವ ರೈತ ಮುಖಂಡರಾದ ಶ್ರೀಯುತ ಕೆ.ಟಿ.ತಿಪ್ಪೇಸ್ವಾಮಿಯವರಿಗೆ “ಹಿರಿಯೂರುನ್ಯೂಸ್” ತಂಡದ ವತಿಯಿಂದ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರಲಾಗಿದೆ.
ಅವರ ಈ ಹುಟ್ಟುಹಬ್ಬದ ಸಂದರ್ಭದಲ್ಲಿ ನಮ್ಮ ಅತ್ಯಂತ ಆತ್ಮೀಯರು ಹಾಗೂ ರೈತ ಮುಖಂಡರಾದ ಶ್ರೀಯುತ ಕೆ.ಟಿ.ತಿಪ್ಪೇಸ್ವಾಮಿಯವರಿಗೆ ಮತ್ತು ಅವರ ಕುಟುಂಬ ವರ್ಗದವರಿಗೆ ಆ ಭಗವಂತ ಆರೋಗ್ಯ, ಆಯಸ್ಸು-ಯಶಸ್ವಿನ ಜೊತೆಗೆ ಜೀವನದಲ್ಲಿ ಸುಖ ಶಾಂತಿ ನೆಮ್ಮದಿಯನ್ನು ಕೊಟ್ಟು ಕಾಪಾಡಲಿ ಎಂಬುದಾಗಿ “ಹಿರಿಯೂರುನ್ಯೂಸ್” ತಂಡದ ಮುಖ್ಯಸ್ಥರು ಹಾಗೂ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಾದ ಆಲೂರುಹನುಮಂತರಾಯಪ್ಪರವರು ಹಾಗೂ ಹಿರಿಯ ಪತ್ರಕರ್ತರುಗಳಾದ ಪಿ.ಆರ್.ಸತೀಶ್ ಬಾಬು, ಗೋಸಿಕೆರೆರಂಗನಾಥ್ ಹಾಗೂ ಶ್ರೀಪಾದ್ ವಸಿಷ್ಠ, ಶಿವರಾಜ್ ನಾಯಕ್, ಉಮೇಶ್ ಯಾದವ್, ಕೇಶವಮೂರ್ತಿ, ಇರ್ಫಾನ್ ವುಲ್ಲಾ ಇವರುಗಳು ಶುಭಹಾರೈಸಿದ್ದಾರೆ.
