October 28, 2026
00002

ಹಿರಿಯೂರು :

ಸ್ವಚ್ಛತೆ ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಕಸಮುಕ್ತ ಹಿರಿಯೂರು ಸ್ವಚ್ಛ, ಸುಂದರ ಹಾಗೂ ಆರೋಗ್ಯಕರ ಹಿರಿಯೂರು ನಿರ್ಮಾಣ ಮಾಡುವ ಗುರುತರ ಜವಾಬ್ದಾರಿ ಪ್ರತಿಯೊಬ್ಬ ನಾಗರೀಕರ ಮೇಲಿದೆ ಎಂಬುದಾಗಿ ನಗರಸಭೆ ಪೌರಾಯುಕ್ತರಾದ ಎ.ವಾಸೀಂ ಹೇಳಿದರು.

ನಗರದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಸ್ವಚ್ಛ ಭಾರತ್ ಅಭಿಯಾನದ ಪ್ರಯುಕ್ತ ಹಿರಿಯೂರು ನಗರಸಭೆ ವ್ಯಾಪ್ತಿಯಲ್ಲಿ ಬರುವ ವಾರ್ಡ್ ನಂಬರ್ 15 ಸರ್ಕಾರಿ ಸರ್ವಾಜನಿಕ ಆಸ್ಪತ್ರೆಯ ಆವರಣವನ್ನು ಸಂಪೂರ್ಣವಾಗಿ ಕ್ಲಿಯರ್ ಮಾಡಿ ಸ್ವಚ್ಛಗೊಳಿಸುವ ಕಾರ್ಯವನ್ನು ಪರಿಶೀಲಿಸಿ, ನಂತರ ಅವರು ಮಾತನಾಡಿದರು.

ಸಾರ್ವಜನಿಕ ಆಸ್ಪತ್ರೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಸ ಸಂಗ್ರಹವಾಗುವ ಸ್ಥಳಗಳನ್ನು ಗುರುತಿಸಿ, ಆರೋಗ್ಯ ನಿರೀಕ್ಷಕರು,ಪೌರ ಕಾರ್ಮಿಕರು, ಕಮ್ಯುನಿಟಿ ಮೊಬೈಲಿಜರ್ ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸ್ಥಳೀಯ ಸಾರ್ವಜನಿಕರ ಸಹಕಾರದೊಂದಿಗೆ ಕಸವನ್ನು ತೆರವುಗೊಳಿಸಿ ಸ್ಥಳವನ್ನು ಸ್ವಚ್ಛಗೊಳಿಸಲಾಗಿದ್ದು,

ಮುಂದಿನ ದಿನಗಳಲ್ಲಿ ಸಾರ್ವಜನಿಕರು ಜಿವಿಪಿ ಸ್ಥಳಗಳಲ್ಲಿ ಕಸ ಹಾಕದೆ, ಮನೆ-ಮನೆಯಿಂದಲೇ ಹಸಿ ಕಸ ಮತ್ತು ಒಣ ಕಸವನ್ನು ಪ್ರತ್ಯೇಕಿಸಿ ಕಸದ ವಾಹನಕ್ಕೆ ನೀಡುವ ಮೂಲಕ ಸ್ವಚ್ಛ ಹಿರಿಯೂರು ನಿರ್ಮಾಣಕ್ಕೆ ಸಹಕರಿಸೋಣ ಎಂದು ತಿಳಿಸಲಾಯಿತು. ಹಾಗು ಗಾಂಧೀಜಿಯವರ “ಸ್ವಚ್ಛತೆಯೇ ಸೇವೆ” ಎಂಬ ಸಂದೇಶವನ್ನು ಸಾರ್ವಜನಿಕರಿಗೆ ತಲುಪಿಸಲಾಯಿತು.

ಈ ಸಂದರ್ಭದಲ್ಲಿ ನಗರಸಭೆ ಪೌರಯುಕ್ತರಾದ ಎ.ವಾಸಿಂರವರು, ಆರೋಗ್ಯ ನಿರೀಕ್ಷಕರಾದ ಸುನೀಲ್ ಕುಮಾರ್, ಅಶೋಕ್ ಕುಮಾರ್, ಮಹಾಲಿಂಗರಾಜು, ಪೌರಕಾರ್ಮಿಕರು ಸ್ವಚ್ಛ ಸಿಬ್ಬಂದಿಗಳು ಕಮ್ಯೂನಿಟಿ ಮೊಬಿಲ್ಜರ್ಸ್ ಗಳು ಡ್ರೈವರ್ ಗಳು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *