October 27, 2026
0002

ಹಿರಿಯೂರು :

ನಗರಸಭೆ ಮುಂದೆ ನೆಹರು ಮೈದಾನದಲ್ಲಿ ಶ್ರೀಶಕ್ತಿಗಣಪತಿಯ ಉತ್ಸವದ ಅಡಿಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಅನಧಿಕೃತವಾಗಿ ಎಕ್ಸಿಮಿಷನ್ ಗೆ ಅನುಮತಿ ಮಂಜೂರು ಮಾಡಿರುವ ನಗರಸಭೆಯ ನಡೆಯು ನಿಜಕ್ಕೂ ವಿಷಾದನೀಯ ಸಂಗತಿಯಾಗಿದೆ ಎಂಬುದಾಗಿ ದಲಿತ ಮುಖಂಡರಾದ ಜಿ.ಎಲ್.ಮೂರ್ತಿ ಬೇಸರ ವ್ಯಕ್ತಪಡಿಸಿದ್ದಾರೆ.

ನಗರದ ನಗರಸಭೆ ಆವರಣದಲ್ಲಿ ದಲಿತ ಸ್ವಾಭಿಮಾನಿ ಸಮಿತಿ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ. ದಲಿತ ಪರಿವರ್ತನವಾದ, ದಲಿತ ಸಂಘರ್ಷ ಎಂ.ಮೂರ್ತಿ ಬಣ. ದಲಿತ ಪರ ಸಂಘಟನೆ. ಬಾಬು ಜಗಜೀವನ ರಾಂ ಸಂಘ ಇವರುಗಳ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾಂಕೇತಿಕ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಈ ವರ್ಷ ಭೀಕರ ಬರಗಾಲವಿದ್ದು, ನಗರ ಹಾಗೂ ಹಳ್ಳಿಗಾಡಿನಿಂದ ಪ್ರತಿ ದಿನಾಲೂ ಲಕ್ಷನುಗಟ್ಟಲೆ ವ್ಯವಹಾರ ನೆಡೆಯುವ ಎಕ್ಷಿಮಿಷನ್ ಕಾರ್ಯಕ್ರಮದಲ್ಲಿ ದುಬಾರಿ ಧರ ವಸೂಲಿ ವಿಷಯ ನಮ್ಮ ಸಂಘಟನೆ ಗಮನಕ್ಕೆ ಬಂದ್ದಿದ್ದು, ನಾವುಗಳು ಈ ವಿಷಯವನ್ನು ಹಿರಿಯೂರು ನಗರಸಭೆಗೆ ಅಕ್ಟೋಬರ್ 1 ರಂದು ದೂರು ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ,

ಈ ನಿಟ್ಟಿನಲ್ಲಿ ಈ ದಿನ ದಲಿತ ಸ್ವಾಭಿಮಾನಿ ಸಮಿತಿ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ. ದಲಿತ ಪರಿವರ್ತನವಾದ, ದಲಿತ ಸಂಘರ್ಷ ಎಂ.ಮೂರ್ತಿ ಬಣ. ದಲಿತ ಪರ ಸಂಘಟನೆ. ಬಾಬು ಜಗಜೀವನ ರಾಂ ಸಂಘ ಇವರುಗಳ ನೇತೃತ್ವದಲ್ಲಿ ನಗರಸಭೆ ಮುಂಭಾಗದಲ್ಲಿ ಸಾಂಕೇತಿಕ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂಬುದಾಗಿ ಹೇಳಿದರು.

ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಜಿ.ಎಲ್.ಮೂರ್ತಿ, ಜೀವೇಶ, ಎ.ಆರ್.ಧನಂಜಯ, ಕಣುಮೇಶ್, ಮಂಜುಹೆಗ್ಗೆರೆ, ಮಹೇಶ್ಮೀಡಿಯಾ, ಮಹಾಂತೇಶ್, ಪ್ರದೀಪ್, ಕುಮಾರದೊಡ್ಡಘಟ್ಟ, ವಿಜಯ, ತಿಪ್ಪೇಸ್ವಾಮಿ, ವಕೀಲರಾದ ನಾಗರಾಜು, ಯೋಗೇಶ್, ಬಾಬುಹರ್ತಿಕೋಟೆ, ಮಾರುತೇಶ್ ಕೂನಿಕೆರೆ. ನಗರಸಭೆ ಮಾಜಿ ಅಧ್ಯಕ್ಷರಾದ ಶಿವರಂಜಿನಿ, ಕೆಂಚಪ್ಪ ಇತರರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *