October 6, 2026
007

ಹಿರಿಯೂರು :

ನಾಲ್ಕು ವರ್ಷಗಳಿಂದ ನಿರಂತರ ಹೋರಾಟ ಮಾಡಿದ ಫಲವಾಗಿ ಇಂದು ಐಮಂಗಳ ಹೋಬಳಿಯ ಕೆಲವು ಕೆರೆಗಳಿಗೆ ಮಾತ್ರ ನೀರು ಹರಿಸಲಾಗಿದೆ ಮತ್ತು ಜೆಜೆ ಹಳ್ಳಿ ಹೋಬಳಿಯ ಕೆರೆಗಳಿಗೆ ನೀರು ಹರಿಸುವ ವಿಚಾರವಾಗಿ ಟೆಂಡರ್ ಗುತ್ತಿಗೆದಾರರು ನಿಗದಿಯಾಗಿದ್ದು ಕೂಡಲೇ  ಕಾಮಗಾರಿ ಪ್ರಾರಂಭ ಮಾಡಬೇಕಾಗಿದೆ ಎಂಬುದಾಗಿ ರೈತಸಂಘದ ಜಿಲ್ಲಾಧ್ಯಕ್ಷರಾದ ಕೆ.ಟಿ.ತಿಪ್ಪೇಸ್ವಾಮಿ ಹೇಳಿದರು.

ನಗರದ ರೈತ ಸಂಘದ ಕಚೇರಿಯಲ್ಲಿ ಕರೆಯಲಾಗಿದ್ದ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ವಾಣಿವಿಲಾಸ ಜಲಾಶಯಕ್ಕೆ 5 ಟಿಎಂಸಿ ನೀರನ್ನು ಲೋಕೇಶನ ಕೊಡಿ ಮತ್ತು ಭದ್ರಾ ಮೇಲ್ದಂಡೆ ಯೋಜನೆಯಿಂದ ಈ ವರ್ಷದ ಎರಡು ಟಿಎಂಸಿ ನೀರನ್ನು ಕೂಡಲೆ ಹರಿಸಿ, ಗಾಯತ್ರಿ ಜಲಾಶಯ ಸೇರಿ ಕಲ್ವಳಿ ಭಾಗದ 16 ಕೆರೆಗಳಿಗೆ ನೀರು ಹರಿಸುವ ಕಾಮಗಾರಿಯನ್ನು ಪೂರ್ಣಗೊಳಿಸಿ ಕೂಡಲೇ ನೀರು ಹರಿಸಬೇಕು

ಜೊತೆಗೆ ಕಸಬಾ ಹಾಗೂ ಐಮಂಗಳ ಹೋಬಳಿಯ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಯನ್ನು ತುರ್ತಾಗಿ ಮುಗಿಸಿ ನೀರು ತುಂಬಿಸಬೇಕು, ಧರ್ಮಪುರ ಭಾಗದ ಕೆರೆಗಳಿಗೆ ವಾಟರ್ ಎಲೆಕ್ಷನ್ ಮಾಡಿ ಉಳಿದ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಯನ್ನು ತುರ್ತಾಗಿ ಮಾಡಬೇಕು ನಮ್ಮ ಈ ಒತ್ತಾಯಗಳನ್ನು ಸರ್ಕಾರ ಪೂರೈಸಬೇಕು

ಇಲ್ಲವಾದಲ್ಲಿ  ಬರುವ ಬೈ ಎಲೆಕ್ಷನ್ ನಲ್ಲಿ ಇಡೀ ತಾಲೂಕಿನ ರೈತರು ನೋಟಕ್ಕೆ ವೋಟು ಹಾಕುವ ಮೂಲಕ ಚುನಾವಣೆಯನ್ನು ರದ್ದುಗೊಳಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು

ಈ ಸಭೆಯಲ್ಲಿ ರೈತಸಂಘದ ತಾಲೂಕು ಅಧ್ಯಕ್ಷ ವೆಂಕಟೇಶ್, ಆಲೂರು ಸಿದ್ದರಾಮಣ್ಣ, ವೀರಣ್ಣಗೌಡ, ಕನ್ಯಪ್ಪ, ಎಂ,ಆರ್.ಈರಣ್ಣ, ಜೆಜೆಹಳ್ಳಿ ಹೋಬಳಿ ಅಧ್ಯಕ್ಷ ಈರಣ್ಣ, ಸಣ್ಣತಿಮ್ಮಣ್ಣ, ವಿರುಪಾಕ್ಷಪ್ಪ, ಮಂಜುನಾಥ್, ಬಾಲಕೃಷ್ಣ ಧರ್ಮಪುರ, ಕೆ.ಸಿ.ಹೊರಕೇರಪ್ಪ,ಜಗನ್ನಾಥ್, ಗಿರೀಶ್, ನಿಂಗಪ್ಪ, ಆರ್.ಕೆ.ಗೌಡ, ನಿರಂಜನ್, ಗೋವಿಂದಪ್ಪ, ಸಿಂಪಣ್ಣ ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *