October 5, 2026
006

ಹಿರಿಯೂರು :

ಕನ್ನಡಚಿತ್ರರಂಗಕ್ಕೆ ನಟ ಶಂಕರ್ ನಾಗ್, ಎಸ್.ಪಿ.ಬಾಲಸುಬ್ರಮಣ್ಯಂ, ಎಸ್.ಜಾನಕಿ ಅಮ್ಮನವರ ಕೊಡುಗೆ ಅಪಾರವಾಗಿದ್ದು, ಈ ನಿಟ್ಟಿನಲ್ಲಿ ಅವರ ಪುಣ್ಯಸ್ಮರಣೆಯಾಗಿ ಗಾನನಮನ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ನಿಜಕ್ಕೂ ಅರ್ಥಪೂರ್ಣವಾಗಿದೆ  ಎಂಬುದಾಗಿ ಜಿ.ವಿ.ರಾಜು ಹೇಳಿದರು.

ನಗರದ ಶ್ರೀಶೈಲ ಸರ್ಕಲ್ ನಲ್ಲಿ ಶಂಕರ್ ನಾಗ್ ಅಭಿಮಾನಿಗಳ ಕಲಾ ವೇದಿಕೆ ವತಿಯಿಂದ ನಟ ನಿರ್ದೇಶಕ ಆಟೋ ರಾಜ ಶಂಕರ್ ನಾಗ್, ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿರವರ ಚಿರಸ್ಮರಣೀಯ ಗಾನನಮನ ಕಾರ್ಯಕ್ರಮವನ್ನು ಉದ್ಘಾಟಿಸಿ ನಂತರ ಅವರು ಮಾತನಾಡಿದರು.

ಹಿರಿಯೂರು ನಗರದಲ್ಲಿ ದಿವು ಶಂಕರ್ ನಾಗ್ ರವರು ಈ ಕಾರ್ಯಕ್ರಮವನ್ನು ದೇವರ ಸ್ಮರಣೆ ಎಂದೆ ಭಾವಿಸಿ ಭಾವಪೂರ್ವಕರಾಗಿ ಪ್ರತಿ ವರ್ಷವೂ ಸಹ ಆಚರಿಸ್ತಾ ಬರುತ್ತಿದ್ದಾರೆ, ಈ ವೇದಿಕೆಗೆ ಹೆಚ್ಚಿನ ಪ್ರೋತ್ಸಾಹ ಸಹಕಾರ ಬೇಕಾಗಿದೆ ಇವರೊಂದಿಗೆ ನಾವುಗಳು ಸಹ ಕೈಜೋಡಿಸುತ್ತೇವೆ ಎಂದರು.

ಪ್ರಾಸ್ತಾವಿಕ ನುಡಿ ಸಂಸ್ಥಾಪಕ ಅಧ್ಯಕ್ಷರಾದ ಡಾ.ಎಚ್.ಸಿ ದಿವುಶಂಕರ್  ಜೂನಿಯರ್ ಶಂಕರ್ ನಾಗ್. ಮಾತನಾಡಿ. ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ ಬೇಕಾಗಿದೆ ಮುಂದಿನ ದಿನಗಳಲ್ಲಿ ಶಂಕರ್ ನಾಗ್ ರವರ ಕಲಾಮಂದಿರ ಕಟ್ಟುವ ಕನಸು ನಮಗಿದೆ ಇದರಿಂದಾಗಿ ಸಾರ್ವಜನಿಕರು ಹೆಚ್ಚಿನ ಅವಕಾಶಗಳನ್ನು ನೀಡುವುದರ ಜೊತೆಯಲ್ಲಿ ಸಹಕರಿಸಬೇಕು.

ಅಲ್ಲದೆ ಕಲಾವಿದರಿಗಾಗಿ ಈಗಾಗಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕಲಾವಿದರಿಗಾಗಿ ಗುರುತಿನ ಚೀಟಿಯನ್ನು ನೀಡುತ್ತಿದ್ದಾರೆ, ಕಲಾವಿದರು ಇದರ ಸದುಪಯೋಗ ಪಡೆಯಬೇಕೆಂದು ತಿಳಿಸಿದರು.ಕಲಾವಿದರಿಗೆ ಅಭಿಮಾನಕ್ಕೆ ಕೊರತೆ ಇಲ್ಲ ಅವಕಾಶಕ್ಕೆ ಕೊರತೆ ಇದೆ ಇಲಾಖೆಯಾಗಲಿ ಅಥವಾ ಸಂಘ-ಸಂಸ್ಥೆಯಾಗಲಿ ಕಲಾವಿದರ ಕಡೆ ಗಮನವರಿಸಿ ಇವರಿಗೆ ಪ್ರೋತ್ಸಾಹಿಸಬೇಕು ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಕೆ.ಪರಶುರಾಮ, ಗೊರಪ್ಪ ಜ್ಯೂನಿಯರ್ ರಾಜ್ ಕುಮಾರ್, ಶಿವಕುಮಾರ್ ಸ್ವಾಮೀಜಿ, ರೈತ ಹೋರಾಟಗಾರ ಗಡಾರಿ ಕೃಷ್ಣಪ್ಪ, ಆರ್.ಧನಂಜಯ್, ತಬಲಾ ಸುಬ್ರಮಣಿ, ರಂಗಸ್ವಾಮಿ, ಸಿದ್ದೇಶ್, ಶ್ರೀನಿವಾಸ್, ಪ್ರವೀಣ್ ಇತರರು ಭಾಗವಹಿಸಿದ್ದರು. ಕಾರ್ಯಕ್ರಮದ ಸವಿನೆನಪಿಗಾಗಿ ಸಾರ್ವಜನಿಕಆಸ್ಪತ್ರೆ ರೋಗಿಗಳಿಗೆ ಹಾಲು-ಬ್ರೆಡ್ ವಿತರಿಸಲಾಯಿತು.

About The Author

Leave a Reply

Your email address will not be published. Required fields are marked *