
ಹಿರಿಯೂರು :
“ದಾಳಿಗೆ ನನ್ನ ವಿರೋಧ ಇಲ್ಲ. ಆದರೆ ಅದು ನಿರ್ದಿಷ್ಟ ಗುರಿಯ ರಾಜಕೀಯ ಪ್ರೇರಿತವಾಗಿದ್ದರೆ ಮಾತ್ರ ವಿಷಾದನೀಯ” ಎಂದು ಬೊಮ್ಮನಹಳ್ಳಿ ಬಾಬು ಮಾಲೀಕತ್ವದ ಅಟ್ಟಿಕಾ ಗೋಲ್ಡ್ ಕಂಪನಿ ಮೇಲೆ ಜಾರಿ ನಿರ್ದೇಶನಾಲಯವು ನಡೆಸಿದ ದಾಳಿಯ ಕುರಿತು ಖ್ಯಾತ ಕಾದಂಬರಿಕಾರ ಡಿ.ಸಿ.ಪಾಣಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
“ಚುನಾವಣಾ ಆಯೋಗ ಹಾಗು ಜಾರಿ ನಿರ್ದೇಶನಾಲಯಗಳನ್ನು ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತದೆ ಎಂಬ ಟೀಕೆಗಳಿಗೆ ಇದು ಪುಷ್ಠಿ ನೀಡುತ್ತದೆ” ಎಂದು ಅವರು ವಿಶ್ಲೇಷಣೆ ಮಾಡಿದರು.
“ಒಂದು ಸಮೀಕ್ಷೆಯಲ್ಲಿ, ಹಿರಿಯೂರು ಕ್ಷೇತ್ರದ ಉಪಚುನಾವಣೆಯ ಸಂಭವನೀಯ ಆಕಾಂಕ್ಷಿಗಳ ವೈಯುಕ್ತಿಕ ಸಾಮರ್ಥ್ಯದ ಅಂದಾಜಿನಲ್ಲಿ ಬೊಮ್ಮನಹಳ್ಳಿ ಬಾಬು ಮೊದಲ ಸ್ಥಾನದಲ್ಲಿರುವುದು ಸಹ ಈ ದಾಳಿಗೆ ಕಾರಣವಾಗಿರಬಹುದು” ಎಂಬ ಸಂದೇಹವನ್ನು ಸಹ ಡಿ.ಸಿ.ಪಾಣಿ ತಿಳಿಸಿದ್ದಾರೆ.
