
ಹಿರಿಯೂರು :
ಸ್ಥಳೀಯ ಹಿಂದೂ ಮಹಾಗಣಪತಿ ಮಂಟಪದಲ್ಲಿ ವಿಶ್ವ ಹಿಂದೂ ಪರಿಷತ್, ಭಜರಂಗದಳ, ಹಿಂದೂ ಮಹಾಗಣಪತಿ ಸಮಿತಿ ಹಾಗೂ ಥೇರಾ ಪಂತ್ ಯುವಕ ಪರಿಷತ್ ಇವರುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಬೃಹತ್ ರಕ್ತದಾನ ಶಿಬಿರವು ಅತ್ಯಂತ ಯಶಸ್ವಿಯಾಗಿ ಜರುಗಿತು.
ಈ ಕಾರ್ಯಕ್ರಮದಲ್ಲಿ ಮುಖಂಡರಾದ ನಾರಾಯಣರೆಡ್ಡಿ, ಪ್ರಶಾಂತ್, ಗೋವಿಂದಾಚಾರ್, ನವೀನ್, ಎಚ್.ಎಸ್.ಅಮರನಾಥ್, ನಾಗದೀಪ್, ಪ್ರಭಾಕರ್, ಗೌರವ ಚೋಪ್ರಾ, ಸುಚಿತ್ರ ಅಮರ್ ನಾಥ್, ಸ್ವರ್ಣರೆಡ್ಡಿ ಸೇರಿದಂತೆ ವಿಶ್ವ ಹಿಂದೂ ಮಹಾ ಗಣಪತಿ ಸಮಿತಿಯ ಪದಾಧಿಕಾರಿಗಳು, ಭಜರಂಗದಳ ಹಾಗೂ ಸೇವಾ ಪಂತ್ ಯುವಕ ಪರಿಷತ್ ಸದಸ್ಯರು ಉಪಸ್ಥಿತರಿದ್ದರು.
