
ಹಿರಿಯೂರು :
ಖ್ಯಾತ ಹಿರಿಯ ಚಲನಚಿತ್ರ ನಟ ಅನಂತನಾಗ್ ಅವರಿಗೆ ಕೇಂದ್ರ ಸರ್ಕಾರ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡುತ್ತಿರುವುದು ಇಡೀ ಕನ್ನಡ ನಾಡು ಹೆಮ್ಮೆಪಡುವ ಹಾಗೂ ಸಂತಸ ಪಡುವಂತ ಐತಿಹಾಸಿಕ ಸಂಗತಿಯಾಗಿದೆ ಎಂಬುದಾಗಿ ಹಿರಿಯೂರಿನ ಸಾಹಿತಿ ಎಂ.ಕಿರಣ್ ಮಿರಜ್ಕರ್ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡಿರುವ ಅವರು 79 ವಸಂತಗಳನ್ನು ಕಂಡಿರುವ ಹಿರಿಯ ನಟ ಅನಂತನಾಗ್ ಅವರು 300ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿ ಅಪ್ರತಿಮ ಹೆಸರುಗಳಿಸಿರುವ ಗೌರವಾನ್ವಿತ ಕಲಾವಿದರಾಗಿದ್ದಾರೆ. ಅಂತಹ ಮೇರು ನಟನಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಲಭಿಸಿರುವುದು ಸಮಸ್ತ ಕನ್ನಡ ಚಲನಚಿತ್ರರಂಗಕ್ಕೆ ಮತ್ತೊಂದು ಗರಿಯಾಗಿದೆ ಎಂಬುದಾಗಿ ಪ್ರಶಂಸಿದ್ದಾರೆ.
ಇದೇ ವೇಳೆ ಪ್ರತಿಭಾವಂತ ನಟ ಹಾಗೂ ನಿರ್ದೇಶಕ ದಿವಂಗತ ಶಂಕರ್ ನಾಗ್ ಅವರ ಕೊಡುಗೆಯನ್ನು ಸ್ಮರಿಸಿರುವ ಕಿರಣ್ ಮಿರಜ್ಕರ್ ದಿವಂಗತ ಶಂಕರ್ ನಾಗ್ ಅವರು ಇಂದು ಜೀವಂತವಾಗಿದಿದ್ದರೆ, ಈ ಅಣ್ಣತಮ್ಮಂದಿರು ಇಬ್ಬರಿಗೂ ಒಟ್ಟಾಗಿ ಮಹಾನ್ ಪ್ರಶಸ್ತಿ ಸಂದ ಗೌರವ ಸಿಗುತ್ತಿತ್ತು ಎಂದು ತಮ್ಮ ಭಾವನಾತ್ಮಕ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
