October 6, 2026
0000001

ಹಿರಿಯೂರು :

ವಿಶ್ವಕರ್ಮ ಬ್ರಹ್ಮನ ಸಂತತಿಗೆ ಸೇರಿದ್ದು, ಎರಡನೇ ಬ್ರಹ್ಮ ಎಂದೇ ಖ್ಯಾತಿ ಪಡೆದಿದ್ದಾರೆ, ಸಮಾಜದಲ್ಲಿ ಎಲೆಮರಿಯ ಕಾಯಿಯಂತೆ ಕಾಯಕ ಮಾಡುತ್ತಿರುವ ವಿಶ್ವಕರ್ಮ ಜನಾಂಗದವರಿಗೆ ರಾಜ್ಯ ಸರ್ಕಾರ “ವಿಶ್ವಕರ್ಮರತ್ನ ಪ್ರಶಸ್ತಿ”ಯನ್ನು ನೀಡಿ ಗೌರವಿಸಬೇಕು ಎಂಬುದಾಗಿ ಪ್ರೌಢಶಾಲಾ ಶಿಕ್ಷಕರಾದ ಆರ್.ನಾಗಭೂಷಣ್ ಆಚಾರ್ ಮನವಿ ಮಾಡಿದರು.

ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರದಂದು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವಕರ್ಮ ಜಯಂತಿಯಲ್ಲಿ ವಿಶೇಷ ಉಪನ್ಯಾಸವನ್ನು ನೀಡಿ, ನಂತರ ಅವರು ಮಾತನಾಡಿದರು.

ಪ್ರತಿ ಯುಗದಲ್ಲಿಯೂ ರಾಜವಂಶಗಳಿಗೆ ಸೇರಿದ ಅರಮನೆ ದೇವಾಲಯಗಳನ್ನು ನಿರ್ಮಿಸಿದವರು ವಿಶ್ವಕರ್ಮರು, ಅಕ್ಕಸಾಲಿಗ, ಬಡಿಗ, ಕಮ್ಮಾರ, ವಾಸ್ತುಶಿಲ್ಪ ಹಾಗೂ ಲೋಹ ಶಿಲ್ಪಗಳೆಂಬ ಪಂಚ ಕಸುಬುದಾರಿಕೆಯಲ್ಲಿ ತೊಡಗಿಸಿಕೊಂಡಿರುವವರನ್ನು ಸಮಾಜದ ಎಲ್ಲಾ ವರ್ಗದ ಜನರು ಬಳಸಿಕೊಳ್ಳುತ್ತಾರೆ,

ಆದರೆ ರಾಜರ ಕಾಲದಲ್ಲಿ ಸಿಗುತ್ತಿದ್ದ ಗೌರವ ಸನ್ಮಾನ ಸ್ಥಾನಮಾನಗಳು ಈಗ ನೆನಪು ಮಾತ್ರ ಎಂಬಂತಾಗಿದೆ, ವಿಶ್ವಕರ್ಮರನ್ನು ಕಾಯಕಕ್ಕೆ ಮಾತ್ರ ಬಳಸಿಕೊಂಡು ನಂತರ ದೂರವಿಡುವ ಪ್ರವೃತ್ತಿ ಒಳ್ಳೆಯದಲ್ಲ, ಸರ್ಕಾರ ನಮ್ಮ ಸಾಮಾಜಿಕ ಸೇವೆಯನ್ನು ಗುರುತಿಸಿ ಮನ್ನಣೆ ನೀಡಬೇಕು ಎಂಬುದಾಗಿ ಮನವಿ ಮಾಡಿದರು.

ವಿಶ್ವಕರ್ಮ ಸಮಾಜದ ತಾಲೂಕು ಘಟಕದ ನಿಕಟ ಪೂರ್ವ ಅಧ್ಯಕ್ಷರಾದ ಪಿ.ನಾರಾಯಣಚಾರ್ ಮಾತನಾಡಿ, ನಗರದಲ್ಲಿ ವಿಶ್ವಕರ್ಮ ಜನಾಂಗದವರಿಗೆ ಪ್ರತ್ಯೇಕ ಸ್ಮಶಾನದ ಜಾಗ ಮಂಜೂರು ಮಾಡಬೇಕು, ಕಾಳಿಕಾಂಬ ಹಾಗೂ ವೀರಭದ್ರಸ್ವಾಮಿ ದೇವಾಲಯಗಳ ಜೀರ್ಣೋದ್ಧಾರ ಮತ್ತು ವಿಶ್ವಕರ್ಮ ಸಮುದಾಯ ಭವನ ನಿರ್ಮಾಣಕ್ಕೆ ಬೇಕಿರುವ ರಸ್ತೆ ವ್ಯವಸ್ಥೆ ಮಾಡಿಕೊಡಬೇಕು ಎಂದು ತಹಶೀಲ್ದಾರ್ ಅವರಿಗೆ ಮನವಿ ಮಾಡಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲ್ಲೂಕು ತಹಶೀಲ್ದಾರರಾದ ಎಂ.ಸಿದ್ದೇಶ್ ವಹಿಸಿದ್ದರು. ಸಮಾರಂಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಬಾಲಕೃಷ್ಣ, ಪ್ರಭಾಕರ್ ಆಚಾರ್, ರಾಜಾಚಾರ್, ನಾಗಪ್ರಸಾದ್, ಮಲ್ಲೇಶಾಚಾರ್, ವಿನಯ್, ಮಂಜುನಾಥ್ ಆಚಾರ್, ಬಸವರಾಜ ಆಚಾರ್, ನಟರಾಜಾಚಾರ್, ಪರಮೇಶ್ವರಾಚಾರ್, ಗೋಪಾಲ ಆಚಾರ್, ನವೀನ್, ಪ್ರಕಾಶ್, ನಗರಸಭೆ ಪೌರಾಯುಕ್ತರಾದ ಎ.ವಾಸೀಂ, ನಗರ ಠಾಣೆ ಎಸ್.ಐ.ಶಶಿಕಲಾ, ವಿವಿಧ ಇಲಾಖೆ ಅಧಿಕಾರಿಗಳಾದ ಸೈಯದ್ ಜಾಫರ್, ಜಿ.ಡಿ.ಶ್ರೀದೇವಿ, ಚಂದ್ರಶೇಖರ್, ಸತೀಶ್ ನಾಯ್ಕ, ಪ್ರಭಾಕರ್ ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *