
ಹಿರಿಯೂರು :
ಮನುಷ್ಯನ ಬದುಕಿನಲ್ಲಿ 60 ವರ್ಷ ಎನ್ನುವುದು ಕೇವಲ ಒಂದು ಸಂಖ್ಯೆ ಅಲ್ಲ, ಅದು ಒಬ್ಬ ವ್ಯಕ್ತಿ ನಡೆದು ಬಂದ ದಾರಿಯ ನೆನಪುಗಳಾಗಿದೆ, ಚಿಕ್ಕಪ್ಪನಹಳ್ಳಿ ಷಣ್ಮುಖರವರು 60 ವರ್ಷಗಳ ಗಡಿಯಲ್ಲಿದ್ದಾರೆ, ಈ ಸಂದರ್ಭದಲ್ಲಿ ಅವರ ಗೆಳೆಯರು ಒಡನಾಡಿಗಳು ಹೋರಾಟಗಾರರು ಹಾಗೂ ದುರ್ಗದ ಜನಪರ ಸಂಘಟನೆಗಳ ಮಿತ್ರರು ಸೇರಿ “ಷಣ್ಮುಖ 60” ಎಂಬ ವಿನೂತನ ನಾಗhanರೀಕ ಗೌರವವನ್ನು ಸಲ್ಲಿಸುತ್ತಿರುವುದು ಒಬ್ಬ ವ್ಯಕ್ತಿಗೆ ಸಲ್ಲಿಸುವ ಸನ್ಮಾನಕ್ಕಿಂತಲೂ ಒಂದು ಕಾಲಘಟ್ಟದ ಮೌಲ್ಯಗಳಿಗೆ ಸಲ್ಲಿಸುವ ಗೌರವದಂತಿದೆ.
ಚಿತ್ರದುರ್ಗದ ಜನರಿಗೆ ಚಿಕ್ಕಪ್ಪನಹಳ್ಳಿ ಷಣ್ಮುಖ ಎಂದರೆ ಚಿತ್ರದುರ್ಗ ಪತ್ರಿಕೋದ್ಯಮ ನೀರಾವರಿ ಹೋರಾಟ ಸಾಮಾಜಿಕ ಚಳುವಳಿ ಮತ್ತು ಜನಪರ ಹೋರಾಟಗಳ ನಡುವೆ ತನ್ನದೇ ಆದ ಚಾಫು ಮೂಡಿಸಿರುವ ಚಿಕ್ಕಪ್ಪನಹಳ್ಳಿ ಷಣ್ಮುಖರ ಬದುಕು ಶುದ್ಧ ಕೈಗನ್ನಡಿಯಂತಿದ್ದು, ಇಂದಿನ ಕಿರಿಯ ಪತ್ರಕರ್ತರಿಗೆ ಮಾದರಿಯಾಗಿದೆ. ಪ್ರಶ್ನಿಸುವ ನೈತಿಕತೆಯನ್ನು ಕಳೆದುಕೊಳ್ಳದೆ ಪತ್ರಕರ್ತ ವೃತ್ತಿಯ ಬದ್ಧತೆಯ ಜೊತೆಗೆ ಹೋರಾಟಗಾರನಾಗಿ ಜನರ ಸಮಸ್ಯೆಯನ್ನು ತನ್ನ ಸಮಸ್ಯೆಯೆಂದೇ ಭಾವಿಸಿರುವ ಸಾಮಾಜಿಕ ಕಾರ್ಯಕರ್ತ ಇವರಾಗಿದ್ದಾರೆ.
ಸುಮಾರು 30 ವರ್ಷಗಳ ಹಿಂದೆ ಚಿಕ್ಕಪ್ಪನಹಳ್ಳಿ ಷಣ್ಮುಖರವರ ಸಂಪಾದಕತ್ವದಲ್ಲಿ ಚಿತ್ರದುರ್ಗದ ಜೆಸಿಆರ್ ಬಡಾವಣೆಯಿಂದ ಹೊರಬರುತ್ತಿದ್ದ “ಹೊಸಸಂಕೀರ್ಣ” ಎಂಬ ಮಳೆ ಜೋಡಿಸುವ ಪತ್ರಿಕೆಯಿಂದ ಪ್ರಾರಂಭವಾದ ನಮ್ಮ ಮತ್ತು ಚಿಕ್ಕಪ್ಪನಹಳ್ಳಿ ಷಣ್ಮುಖರವರ ಸ್ನೇಹ, ಬಂಜಗೆರೆವಿಶ್ವ, ದೊಣ್ಣೆಹಳ್ಳಿ ಗುರುಮೂರ್ತಿ, ಲಕ್ಷ್ಮಣ್ ಬಂಡ್ಲಾರಹಟ್ಟಿ, ಗೋವಿಂದಪ್ಪಗುಡಿಹಳ್ಳಿ, ನರೇನಹಳ್ಳಿ ಅರುಣ್ ಕುಮಾರ್ ಸೇರಿದಂತೆ ಅನೇಕ ಚಿತ್ರದುರ್ಗದ ಪತ್ರಕರ್ತ ಮಿತ್ರರನ್ನು ಗಳಿಸಿಕೊಟ್ಟಿದ್ದು,ಇದು ನನ್ನ ಬುದುಕಿನಲ್ಲಿ ಅವಿಸ್ಮರಣೀಯ ಘಟನೆಯಾಗಿ ಉಳಿದಿದೆ.
ಸುಮಾರು 2 ಸಾವಿರ ಇಸವಿಯಿಂದ ನಾನು “ಕನ್ನಡಪ್ರಭ” ಪತ್ರಿಕೆ ವರದಿಗಾರನಾಗಿ ಕೆಲಸ ಮಾಡುವಾಗ ಆ 8-10 ವರ್ಷಗಳಲ್ಲಿ ಚಿಕ್ಕಪ್ಪನಹಳ್ಳಿ ಷಣ್ಮುಖರವರು ನೀಡಿದ ಸ್ನೇಹ ಸಹಕಾರಕ್ಕೆ ನನ್ನೆಲ್ಲ ಪತ್ರಕರ್ತನ ಬದುಕಿನ ಆರಂಭದಲ್ಲಿ ಬೆಂಬಲವಾಗಿ ನಿಂತ ಆತ್ಮೀಯ ಗೆಳೆಯ ಚಿಕ್ಕಪ್ಪನಹಳ್ಳಿ ಷಣ್ಮುಖರವರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪುರಸ್ಕೃತ ಪತ್ರಕರ್ತರು ಹಾಗೂ “ಹಿರಿಯೂರುನ್ಯೂಸ್” ತಂಡದ ಮುಖ್ಯಸ್ಥರಾದ ಆಲೂರು ಹನುಮಂತರಾಯಪ್ಪನವರಿಂದ ಅನಂತ ಅನಂತ ಧನ್ಯವಾದಗಳು. ಅವರು 60 ನ್ನು ಸಂಭ್ರಮಿಸಿ, ನಮ್ಮ ಜೊತೆ ಇನ್ನೂ ನೂರು ಕಾಲ ಬಾಳಲಿ.
