September 13, 2026
0004

ಹಿರಿಯೂರು :

ಇಂದಿನ ವಿದ್ಯಾರ್ಥಿಗಳು ಶಿಕ್ಷಣದ ಜೊತೆಜೊತೆಗೆ ಸಾಮಾಜಿಕ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕೆಂಬ ಉದ್ದೇಶದಿಂದ ದ್ವಿತೀಯ ಸೋಪಾನ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ವಿದ್ಯಾರ್ಥಿಗಳು ಇದರಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂಬುದಾಗಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಹಾಯಕ ಆಯುಕ್ತರಾದ ಕಿರಣ್ ಕುಮಾರ್ ಹೇಳಿದರು.

ನಗರದ ರೋಟರಿ ಸಭಾಭವನದಲ್ಲಿ ರೋಟರಿ, ರೆಡ್ ಕ್ರಾಸ್ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಆಯೋಜಿಸಲಾಗಿದ್ದ ಎನ್.ಡಿ.ಆರ್.ಎಫ್.ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ, ಅವರು ಮಾತನಾಡಿದರು.

ಇದೇ ಸಂದರ್ಭದಲ್ಲಿ ಮಕ್ಕಳಿಗೆ ದ್ವಿತೀಯ ಸೋಪಾನ ತರಬೇತಿ ನೀಡಲಾಯಿತು.  ಇದರಲ್ಲಿ ವಿವಿಧ ಶಾಲೆಗಳಿಂದ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ತರಬೇತಿ ಪಡೆದರು. ತಾಲೂಕಿನ ವಿವಿಧ ಶಾಲೆಗಳಿಂದ ಒಟ್ಟು 200 ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಈ ಕಾರ್ಯಾಗಾರದಲ್ಲಿ ರೋಟರಿ ಅಧ್ಯಕ್ಷರಾದ ಹೆಚ್.ಡಿ.ವಸಂತಕುಮಾರ್, ಜಿಲ್ಲಾ ಆಯುಕ್ತರಾದ ದೇವರಾಜ್ ಪ್ರಸಾದ್, ಮತ್ತೊರ್ವ ಜಿಲ್ಲಾ ಸಹಾಯಕ ಅಯುಕ್ತರಾದ ಭೀಮಣ್ಣ ,ಸ್ಥಳೀಯ ಸಂಸ್ಥೆಯ ಪದಾಧಿಕಾರಿಗಳಾದ ನಾಗರಾಜ್, ದೇವರಾಜ್ ಮೂರ್ತಿ, ಸಣ್ಣಭೀಮಣ್ಣ, ಶ್ರೀಮತಿ ಚಂದ್ರವದನ , ಶ್ರೀಮತಿ ನಾಗರತ್ನಮ್ಮ , ರಾಜ್ಯ ಪರಿಷತ್ ಸದಸ್ಯರಾದ ಬಸವರಾಜ್,  ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಆದ ಶ್ರೀ ಕೋಟಿ ಲಿಂಗಯ್ಯ, ಶಿಕ್ಷಕರಾದ ಬಸವರಾಜ್, ವೆಂಕಟೇಶ್, ಶ್ರೀಮತಿ ಹಸೀನಾ, ಶ್ರೀಮತಿ ಕ್ಲಾರ, ಹಾಗೂ ಚಿದಾನಂದ್ ಇತರರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *