
ಹಿರಿಯೂರು :
ಕೇವಲ ಲಕ್ಷ್ಮಿ ಪೂಜೆ ಮಾಡಿದರೆ ದುಡ್ಡು ಬರೋದಿಲ್ಲ, ಜನರು ಮೂಢನಂಬಿಕೆಗಳಿಗೆ ದಾಸರಾಗದೇ ಅದರ ಬದಲು ಕಾಯಕವೇ ಕೈಲಾಸ ಎಂದು ಮಾಡುವ ಕೆಲಸದಲ್ಲಿ ಶ್ರದ್ಧೆ ಇಟ್ಟು ಕೆಲಸ ಮಾಡಿದಾಗ ಆಗ ಲಕ್ಷ್ಮಿ ತಾನಾಗಿಯೇ ಒಲಿಯುತ್ತಾಳೆ, ಪರಮಪೂಜ್ಯ ಶ್ರೀಶ್ರೀಶ್ರೀ ಮಾದರಚನ್ನಯ್ಯ ಸ್ವಾಮೀಜಿಗಳು ಹೇಳಿದರು.
ತಾಲ್ಲೂಕಿನ ಕೂನಿಕೆರೆ ಗ್ರಾಮದ ಶ್ರೀಲಕ್ಷ್ಮೀದೇವರ ಮಹೋತ್ಸವ ಕಾರ್ಯಕ್ರಮವನ್ನುದೀಪ ಬೆಳಗಿಸುವ ಮುಖಾಂತರ ಉದ್ಘಾಟಿಸಿದ ಅವರು ಶ್ರೀ ಲಕ್ಷ್ಮಿ ದೇವರ ದೇವಸ್ಥಾನದ ಗುದ್ದಲಿ ಪೂಜೆಯನ್ನು ಕೂಡ ನೆರವೇರಿಸಿದ, ಮಾತನಾಡಿದರು.
ದುಡ್ಡು ಇದ್ದ ಮಾತ್ರಕ್ಕೆ ನೆಮ್ಮದಿ ಸಿಗುವುದಿಲ್ಲ, ಮಳೆ ಬಂದಿಲ್ಲ ಎಂದು ಕತ್ತೆಗೆ ಪೂಜೆ ಮಾಡೋದು ಕಪ್ಪೆಗಳಿಗೆ ಮದುವೆ ಮಾಡಿಸುವುದು ಇದರಿಂದ ಮಳೆ ಬರೋದಾದರೆ ಯಾವ ಊರಲ್ಲೂ ಬರಗಾಲ ಬರುತ್ತಿರಲಿಲ್ಲ,ಅದೊಂದು ಮೂಡನಂಬಿಕೆ ಅದರ ಬದಲು ಗಿಡ ಮರಗಳು ಬೆಟ್ಟ ಗುಡ್ಡಗಳು ಸರೋವರಗಳು ಹೆಚ್ಚು ಹೆಚ್ಚು ಇದ್ದಾಗ ಮೋಡವನ್ನು ತಡೆದು ಮಳೆ ಬರುತ್ತದೆ ಎಂದರು.
ಈ ಕಾರ್ಯಕ್ರಮದಲ್ಲಿ ಲಕ್ಷ್ಮಿ ದೇವರ ಟ್ರಸ್ಟ್ ನ ಅಧ್ಯಕ್ಷರಾದ ಕೆ.ಹನುಮಂತಪ್ಪ, ಆಂಜನೇಯಸ್ವಾಮಿ ದೇವಸ್ಥಾನದ ಅಧ್ಯಕ್ಷರಾದ ಶಿವಾನಂದ್, ಕರ್ನಾಟಕ ರಾಜ್ಯ ನೌಕರರ ಸಂಘದ ತಾಲೂಕು ಅಧ್ಯಕ್ಷರಾದ ಕೆ.ಹನುಮಂತರಾಯ, ಮೂಡ್ಲಪ್ಪ, ಎಚ್.ನಿಂಗಪ್ಪ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಈರಣ್ಣ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ತಿಪ್ಪೇಸ್ವಾಮಿ, ನರಸಿಂಹಮೂರ್ತಿ, ದೊಡಘಟ್ಟನರಸಿಂಗಜ್ಜ, ಉಮೇಶ್, ಕಲಾವಿದೆ ಶ್ರೀಮತಿ ಲಕ್ಷ್ಮೀ, ಕಲಾವಿದ ಹೆಚ್.ಎಸ್.ಮಾರುತೇಶ ಕೂನಿಕೆರೆ ಹಾಗೂ ಗ್ರಾಮಸ್ತರು ಉಪಸ್ಥಿತರಿದ್ದರು.
