
ಹಿರಿಯೂರು :
ಇಂದಿನ ಆಧುನಿಕ ಜಗತ್ತಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಎದುರಿಸುವುದು ಅನಿವಾರ್ಯವಾಗಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ರೆಡ್ ಫೌಂಡೇಶನ್ ಉಚಿತ ಗ್ರಂಥಾಲಯ ಸೌಲಭ್ಯ ನೀಡಲಾಗುತ್ತಿದೆ ವಿದ್ಯಾರ್ಥಿಗಳು ಈ ಗ್ರಂಥಾಲಯದ ಸದುಪಯೋಗ ಪಡೆದುಕೊಳ್ಳಬೇಕು ಎಂಬುದಾಗಿ ಚಿನ್ನದ ಪದಕ ಪುರಸ್ಕೃತರಾದ ಡಾ.ಎಂ.ಆರ್.ಅಮೃತಲಕ್ಷ್ಮೀ ಹೇಳಿದರು.
ನಗರದ ಪ್ರಧಾನ ರಸ್ತೆಯಲ್ಲಿರುವ ರೆಡ್ ಫೌಂಡೇಶನ್ ಲೈಬ್ರರಿಯ ಶುಭಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅವರು ಮಾತನಾಡಿದರು.

ಇಂದು ವಿದ್ಯಾರ್ಥಿಗಳಿಗೆ ಗ್ರಂಥಾಲಯಗಳ ಅವಶ್ಯಕತೆ ತುಂಬಾ ಇದ್ದು, ರೆಡ್ ಫೌಂಡೇಶನ್ ಅವರು ಉಚಿತವಾಗಿ ಸೇವೆ ನೀಡುವ ಇಂತಹ ಅದ್ಭುತವಾದ ಸಾಹಸ ಮಾಡಿರುವುದು ತುಂಬಾ ಸಂತೋಷದ ವಿಚಾರ, ನಗರದ ನಾಗರಿಕರು, ವಿದ್ಯಾರ್ಥಿಗಳು ಈ ಗ್ರಂಥಾಲಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಎಂಬುದಾಗಿ ಹೇಳಿದರು.
ಈ ಸಂದರ್ಭದಲ್ಲಿ ರೆಡ್ ಫೌಂಡೇಶನ್ ಅಧ್ಯಕ್ಷ ರಾಮಕೃಷ್ಣ, ಕಾರ್ಯದರ್ಶಿ ಅಂಬಿಕಾ, ಖಜಾಂಚಿ ದಯಾನಂದ್, ಎಂ.ರವೀಂದ್ರನಾಥ್, ಕಿರಣ್ ಮಿರಜ್ಕರ್, ಆಯಿಷ ಉಪಸ್ಥಿತರಿದ್ದರು.
