
ಹಿರಿಯೂರು :
ತಾಲ್ಲೂಕಿನ ಜಡೆಗೊಂಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಹಿರಿಯೂರು ಘಟಕದ ವತಿಯಿಂದ ಶಾಲಾ ಮಕ್ಕಳಿಗೆ,ಅಡುಗೆ ಸಿಬ್ಬಂದಿಗೆ ಶಿಕ್ಷಕರಿಗೆ ಹಾಗೂ ಗ್ರಾಮಸ್ಥರಿಗೆ ಅಗ್ನಿ ಅವಘಡಗಳು ಸಂಭವಿಸಿದಾಗ ಯಾವ ರೀತಿ ನಾವು ನಮ್ಮನ್ನು ಹಾಗೂ ಇತರರನ್ನು ರಕ್ಷಣೆ ಮಾಡಿಕೊಳ್ಳುವುದು ಎಂಬುದನ್ನು ಮನಮುಟ್ಟುವಂತೆ ಪ್ರತ್ಯಕ್ಷವಾಗಿ ತೋರಿಸಿ ವಿವರಿಸಿದರು.

ಅಗ್ನಿದುರಂತದ ಸಂದರ್ಭದಲ್ಲಿ ತುರ್ತು ಸೇವೆಗಳ ಕುರಿತು ಮಹತ್ವದ ಮಾಹಿತಿಯನ್ನು ನೀಡಿದ ಪ್ರಮುಖ ಅಗ್ನಿಶಾಮಕರಾದ ಶ್ರೀ ಗರೀಬ್ ಸಾಬ್ ವಲಿ, ಹಾಗೂ ಅಶೋಕ ಅಜ್ಜಿನಕಟ್ಟೆ, ಚಾಲಕರಾದ ಸೈಯದ್ ಸಕಲೇನ್, ಅಗ್ನಿಶಾಮಕರಾದ ಎನ್.ಮಂಜುನಾಥ್ ಇವರುಗಳನ್ನು ಶಿಕ್ಷಣ ಪ್ರೇಮಿಯಾದ ಬಸವರಾಜ್ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಗಂಗಣ್ಣ ವಂದನಾರ್ಪಣೆಯನ್ನು ಮಾಡಿದರು. ಶಾಲೆಯ ಶಿಕ್ಷಕರಾದ ರಾಮಣ್ಣ, ಶಿಕ್ಷಕಿಯರಾದಂತಹ ಶ್ರೀಮತಿ ಶಬ್ನಮ್ ಬೇಗಮ್, ಶ್ರೀಮತಿ ರಾಧಾ, ಶ್ರೀಮತಿ ಮಮತಾ ಇವರುಗಳು ಉಪಸ್ಥಿತರಿದ್ದರು.
