August 7, 2026
0000001

ಹಿರಿಯೂರು :

ನಗರಸಭಾ ವ್ಯಾಪ್ತಿಯಲ್ಲಿನ  ಸಾರ್ವಜನಿಕರು ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ತಮ್ಮ ತಮ್ಮ ಮನೆಗಳಲ್ಲಿ ಸಾಕಿರುವ ನಾಯಿಗಳಿಗೆ ಲಸಿಕೆಯನ್ನು ಹಾಕಿಸಿ, ಬೀದಿಗೆ ಬಿಡದೆ, ಮನೆಯಲ್ಲಿಯೇ ನೋಡಿಕೊಳ್ಳಬೇಕು ಎಂಬುದಾಗಿ ನಗರಸಭೆ ಪೌರಾಯುಕ್ತರಾದ ಎ.ವಾಸೀಂ ಹೇಳಿದರು.

ನಗರದಲ್ಲಿ ಬೀದಿನಾಯಿಗಳ ಕಾಟ ಹೆಚ್ಚಾಗಿರುವ ಕಾರಣ ಮಾನ್ಯ ಸರ್ವೋಚ್ಛ ನ್ಯಾಯಾಲಯದ ಅದೇಶದಂತೆ ಸ್ಪಂದನ ಅನಿಮಲ್‌ ವೆಲ್ಫರ್‌ ಅಂಡ್‌ ಪ್ರಕೃತಿ ಸೇವಾ ಸೊಸೈಟಿ ಡಾ.ಅರುಣ್‌ ಹಾಗೂ ಹಿರಿಯೂರು ನಗರಸಭೆಯ ಆರೋಗ್ಯ ಶಾಖೆಯ ಸಿಬ್ಬಂದಿಗಳಿಂದ ಬೀದಿನಾಯಿಗಳನ್ನು ಹಿಡಿದು ಸಂತಾಣ ಹರಣ ಶಸ್ತ್ರಚಿಕಿತ್ಸೆಯನ್ನು ಮಾಡಿಸಲಾಯಿತು.

ಈ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಕರಾದ ಆಶೋಕ್‌ ಕುಮಾರ್‌, ನಯಾಜ್‌ ಷರೀಪ್‌ ಸೇರಿದಂತೆ ನಗರಸಭೆ  ಸಿಬ್ಬಂದಿಗಳು ಹಾಜರಿದ್ದರು.

About The Author

Leave a Reply

Your email address will not be published. Required fields are marked *