July 30, 2026
000001

ಹಿರಿಯೂರು :

ನಗರದ  ಶ್ರೀಶಂಕರಮಠದಲ್ಲಿ ಶಂಕರ ಜ್ಞಾನ ಮಂದಿರ ಟ್ರಸ್ಟ್ ವತಿಯಿಂದ ವೈಭವದ ಗುರುಪೂರ್ಣಿಮೆ ಕಾರ್ಯಕ್ರಮವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಈಸಂದರ್ಭದಲ್ಲಿ ಶಂಕರಾಚಾರ್ಯರಿಗೆ ಪಾದುಕಾಸೇವಾ ಪೂಜೆ ಹಾಗೂ ಅನ್ನಸಂತರ್ಪಣೆ ನಡೆಸಲಾಯಿತು.

ನಂತರ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಗಳಿಗೆ ಸಮಾಜದ ವತಿಯಿಂದ  ಬ್ರೆಡ್ಡು ಮತ್ತು ಹಣ್ಣುಗಳನ್ನು ವಿತರಿಸಲಾಯಿತು ಮತ್ತು ವಿವಿ ಸರ್ಕಲ್ ನಲ್ಲಿರುವ ಕಣಿವೆ ಮಾರಿಕಾಂಬ ಚಾರಿಟಬಲ್ ಟ್ರಸ್ಟ್ ನಲ್ಲಿ ವೃದ್ದರಿಗೆ ಹಾಗೂ ಅಂಗವಿಕಲರಿಗೆ ಹಣ್ಣು ಮತ್ತು ಬ್ರೆಡ್ ಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಶಂಕರ ಜ್ಞಾನ ಮಂದಿರ ಟ್ರಸ್ಟ್ ಮುಖಂಡರಾದ ಶ್ರೀನಾಥ್, ಸ್ವಾಮಿನಾಥ್, ಡಿ.ಕೆ.ನರಸಿಂಹಮೂರ್ತಿ, ವೆಂಕಟೇಶದೀಕ್ಷಿತ್, ಶ್ರೀನಿವಾಸರಾವ್, ರವಿಶಂಕರ್, ಗಣೇಶ್, ರಾಮಮೂರ್ತಿ, ಹರಿಪ್ರಸಾದ್, ಶ್ರೀಹರ್ಷ ದೀಕ್ಷಿತ್ ಹಾಗೂ ಇತರೆ ಮುಖಂಡರು ಭಾಗವಹಿಸಿದ್ದರು.

About The Author

Leave a Reply

Your email address will not be published. Required fields are marked *