
ಹಿರಿಯೂರು :
ಕಳೆದ 30 ವರ್ಷಗಳಿಂದ ಮಾಧ್ಯಮ ಲೋಕದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ರಾಜ್ಯ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಾದ ಶ್ರೀಯುತ ಆಲೂರುಹನುಮಂತರಾಯಪ್ಪನವರು ಪತ್ರಿಕಾರಂಗಕ್ಕೆ ತಮ್ಮದೇ ಆದ ಸೇವೆ ಸಲ್ಲಿಸಿದ್ದು, ಇದೀಗ ನಮ್ಮ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಗೆ ಒಂದು ಲಕ್ಷ ರೂಗಳ ದೇಣಿಗೆ ನೀಡುವ ಮೂಲಕ ಸಂಘಟನೆಗೆ ನೆರವಾಗಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯ ಎಂಬುದಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ರಾಜ್ಯಾಧ್ಯಕ್ಷ ಬಂಗ್ಲೆಮಲ್ಲಿಕಾರ್ಜುನ ಪ್ರಶಂಸಿದ್ದಾರೆ.
ನಗರದ ಹಿರಿಯ ಪತ್ರಕರ್ತರು ಹಾಗೂ ಸಮಾಜ ಸೇವಕರಾದ ಆಲೂರುಹನುಮಂತರಾಯಪ್ಪನವರ ನಿವಾಸದಲ್ಲಿ “ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ”ಯ 4ನೇ ಪತ್ರಕರ್ತರ ರಾಜ್ಯ ಸಮ್ಮೇಳನ ಸಮಾರಂಭದ ಆಹ್ವಾನಪತ್ರಿಕೆ ನೀಡುವ ಮೂಲಕ ಅವರನ್ನು ಆಹ್ವಾನಿಸಿ, ನಂತರ ಅವರು ಮಾತನಾಡಿದರು.

ಜುಲೈ 20 ರರಾತ್ರಿ ತಡವಾಗಿ ಹಿರಿಯೂರು ನಗರಕ್ಕೆ ಆಗಮಿಸಿದ ನನಗೆ ಅವರ “ಸಿರಿ ರೆಸಿಡೆನ್ಸಿ”ಯಲ್ಲಿ ತಂಗಲಿಕ್ಕೆ ವ್ಯವಸ್ಥೆ ಮಾಡಿರುವ ಹಿನ್ನೆಲೆಯಲ್ಲಿ ಅವರಿಗೊಂದು ಕೃತಜ್ಞತೆ ಹೇಳುವುದರ ಜೊತೆಗೆ ಆಗಸ್ಟ್ 8 ರಂದು ನೆಲಮಂಗಲದ ಪುಷ್ಪ ಬೈರೇಗೌಡ ಕನ್ವೆನ್ ಷನ್ ಹಾಲ್ ನಲ್ಲಿ ನಮ್ಮ ಕಾನಿಪ ಧ್ವನಿ ಸಂಘಟನೆ ವತಿಯಿಂದ ನಡೆಯಲಿರುವ 4 ನೇ ಪತ್ರಕರ್ತರ ರಾಜ್ಯ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಬೇಕೆಂದು ಆಮಂತ್ರಣ ಪತ್ರಿಕೆಯನ್ನು ಕೊಟ್ಟು ಆಹ್ವಾನಿಸಲಾಯಿತು,

]
ಅಲ್ಲದೆ ಕಳೆದ 30 ವರ್ಷಗಳಿಂದ ಮಾಧ್ಯಮ ಲೋಕದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಹಿರಿಯ ಪತ್ರಕರ್ತರಾದ ಆಲೂರುಹನುಮಂತರಾಯಪ್ಪನವರು ಈಹಿಂದೆ ಹಿರಿಯೂರು ವಾರಪತ್ರಿಕೆಯ ಮುಖಾಂತರ ಮಾಧ್ಯಮ ಲೋಕಕ್ಕೆ ಪಾದಾರ್ಪಣೆ ಮಾಡಿ ನಂತರ ದಿನಮಾನಗಳಲ್ಲಿ ಜಿಲ್ಲೆಯ ಜನಪ್ರಿಯ ದಿನಪತ್ರಿಕೆಗಳಾದ ಪ್ರಜಾಪ್ರಗತಿ, ಕನ್ನಡಪ್ರಭ, ಜನವಾಹಿನಿ, ಉತ್ತರಕರ್ನಾಟಕ, ಸೂರ್ಯೋದಯ, ಕರುನಾಡ ಸಂಜೆ, ಕ್ರಾಂತಿದೀಪ, ಹೊಸದಿಗಂತ,ಈ ನಮ್ಮ ಕನ್ನಡನಾಡು ದಿನ ಪತ್ರಿಕೆಗಳಲ್ಲಿ ಸಹ ಈಗಾಗಲೇ ವರದಿಗಾರರಾಗಿ ಅಮೂಲ್ಯವಾದ ಸೇವೆ ಸಲ್ಲಿಸಿದ್ದಾರೆ,

ಇದೀಗ “ಹಿರಿಯೂರುನ್ಯೂಸ್” ವಾಹಿನಿ ಮುಖಾಂತರ ಸುದ್ದಿಗಳನ್ನು ಪ್ರತಿನಿತ್ಯ ಇವರ ಕಛೇರಿಯಿಂದ ಪ್ರಕಟಿಸುತ್ತಿರುವುದರ ಜೊತೆಗೆ ಸುಮಾರು ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಬಳ್ಳಾರಿ, ಬೆಂಗಳೂರಿನ ಅನೇಕ ಸುದ್ದಿ ವಾಹಿನಿಗಳಿಗೆ ಸುದ್ದಿಗಳನ್ನು ಕಳುಹಿಸುತ್ತಿದ್ದು, ಅವರದೇ ಆದ “ಹಿರಿಯೂರುನ್ಯೂಸ್” ವೆಬ್ ಸೈಟ್ ಸಹ ಹೊಂದಿದ್ದು, “ಹಿರಿಯೂರುನ್ಯೂಸ್” ಹೆಸರಿನ ಯೂಬೂಟ್ ಚಾನಲ್ ಮೂಲಕ ಸುದ್ದಿಗಳನ್ನ ಪ್ರಸಾರ ಮಾಡಲಾಗುತ್ತಿದ್ದು, ಪತ್ರಿಕಾರಂಗದಲ್ಲಿ ಇವರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂಬುದಾಗಿ ಅವರು ಹೇಳಿದರು.
ಹಿರಿಯ ಪತ್ರಕರ್ತರಾದ ಆಲೂರುಹನುಮಂತರಾಯಪ್ಪನವರು ಅತ್ಯಂತ ಹೃದಯ ಶ್ರೀಮಂತಿಕೆಯನ್ನು ಹೊಂದಿದ್ದು, ಆಗಸ್ಟ್ 8 ರಂದು ಶನಿವಾರ ನೆಲಮಂಗಲದ ಪುಷ್ಪಬೈರೇಗೌಡ ಕನ್ವೆನ್ ಷನ್ ಹಾಲ್ ನಲ್ಲಿ ನಡೆಯಲಿರುವ ಪತ್ರಕರ್ತರ 4ನೇ ರಾಜ್ಯ ಸಮ್ಮೇಳನದ ಸಮಾರಂಭದಲ್ಲಿ ಈ ಒಂದು ಲಕ್ಷ ರೂಗಳ ದೇಣಿಗೆಯ ಬಾಂಡ್ ಅನ್ನು ಸಂಘಟನೆಗೆ ಹಸ್ತಾಂತರಿಸುವುದಾಗಿ ತಿಳಿಸಿದ್ದು, ಅಲ್ಲದೆ ತಮ್ಮ ಕೊನೆಯ ಉಸಿರಿರುವವರೆಗೂ ಪತ್ರಕರ್ತರಿಗೆ ಬೆಂಬಲವಾಗಿ ನಿಲ್ಲುವುದಾಗಿ ತಿಳಿಸಿರುವ ಇವರಿಗೆ ನಾಡಿನ ಸಮಸ್ತ ಪತ್ರಕರ್ತರ ಪರವಾಗಿ ಅಭಿನಂದನೆಗಳು ಎಂಬುದಾಗಿ ಅವರು ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಾದ ಆಲೂರುಹನುಮಂತರಾಯಪ್ಪ, ಅವರ ಪತ್ನಿ ಶ್ರೀಮತಿಪ್ರೇಮಲೀಲಾ, ಕುಮಾರಿ ಕಾವ್ಯ, ಜ್ಞಾನೇಶ್ ಇತರರು ಉಪಸ್ಥಿತರಿದ್ದರು.
