
ಹಿರಿಯೂರು :
ಜೀವನದಲ್ಲಿ ಸಾಧನೆ ಮಾಡಲು ಸತತ ಪರಿಶ್ರಮ ಹಾಗೂ ಏಕಾಗ್ರತೆ ಮುಖ್ಯ, 6ನೇ ತರಗತಿಯನ್ನು ಓದಿದ ನಾನು ಜೀವನದಲ್ಲಿ ಕಷ್ಟಪಟ್ಟು ಈ ಮಟ್ಟಕ್ಕೆ ಬೆಳೆದು ದೇಶದಲ್ಲೇ ಉತ್ತಮ ಪ್ರಜೆಯಾಗಿ ಬಂದಿದ್ದೇನೆ, ನನ್ನ ಹಾಗೆ ನೀವು ಸಹ ಇನ್ನೂ ಚೆನ್ನಾಗಿ ಓದಿ ದೇಶದ ಉತ್ತಮ ಪ್ರಜೆಯಾಗಿ ಬೆಳೆಯಬೇಕು ಎಂಬುದಾಗಿ ಹಿರಿಯೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾದ ಬೊಮ್ಮನಹಳ್ಳಿ ಬಾಬು ಹೇಳಿದರು.
ನಗರದ ನೆಹರು ಮೈದಾನದಲ್ಲಿ ರಾಜ್ಯಮಟ್ಟದ ಖೋ-ಖೋ ಚಾಂಪಿಯನ್ ಶಿಪ್ ನಲ್ಲಿ ವಿಜೇತರಾದ ತಂಡಗಳಿಗೆ ಬಹುಮಾನವನ್ನು ವಿತರಿಸಿ, ನಂತರ ಅವರು ಮಾತನಾಡಿದ ಅವರು ಆಟದಲ್ಲಿ ಸೋಲು ಗೆಲುವು ಮುಖ್ಯವಲ್ಲ,ಆಟವನ್ನು ಎದುರಿಸುವುದು ಮುಖ್ಯ ತಮ್ಮ ಜೀವನದಲ್ಲಿ ಉತ್ತಮ ಪ್ರಜೆಯಾಗಿ ಬಾಳಬೇಕೆಂದು ಅಟ್ಟಿಕಾ ಗೋಲ್ಟ್ ಕಂಪನಿ ಮಾಲೀಕರಾದ ಬೊಮ್ಮನಹಳ್ಳಿ ಬಾಬುರವರು ಎಲ್ಲ ಮಕ್ಕಳನ್ನು ಕರೆ ನೀಡಿದರು.
ಈ ಕಾರ್ಯಕ್ರಮದ ಪ್ರಾಯೋಜಕರಾದ ಅಟ್ಟಿಕಾ ಗೋಲ್ಟ್ ಕಂಪನಿ ಮಾಲೀಕರಾದ ಬೊಮ್ಮನಹಳ್ಳಿ ಬಾಬುರವರು ಆಟಗಾರರನ್ನು ಅಭಿನಂದಿಸಿದರು. ಈ ಸಮಾರಂಭದಲ್ಲಿ ಕ್ರೀಡಾ ಸಂಸ್ಥೆಯ ಗೌ.ಅಧ್ಯಕ್ಷರುಗಳಾದ ಕೆ.ವಿ.ಅಮರೇಶ್, ಡಿ.ನಾರಾಯಣರೆಡ್ಡಿ, ಕಾರ್ಯಾಧ್ಯಕ್ಷ ಕೆ.ಗೋಪಿನಾಥ್, ಪ್ರಧಾನ ಕಾರ್ಯದರ್ಶಿ ಬಿ.ಎಸ್.ಶಿವಪ್ರಸಾದ್, ಕರ್ನಾಟಕ ರಾಜ್ಯ ಖೋ-ಖೋ ಸಂಸ್ಥೆ ಉಪಾಧ್ಯಕ್ಷರಾದ ಬಸವರಾಜ, ಕಾರ್ಯದರ್ಶಿ ರಾಮಲಿಂಗಪ್ಪ, ಜಿಲ್ಲಾ ಖೋಖೋ ಸಂಸ್ಥೆ ಅಧ್ಯಕ್ಷ ಕುಮಾರಸ್ವಾಮಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿ, ಬೇರೆ ಬೇರೆ ಊರಿನಿಂದ ಬಂದಿರುವ ಆಟಗಾರರನ್ನು ಪ್ರೋತ್ಸಾಹಿಸಿ ಅಭಿನಂದಿಸಿದರು.
