July 29, 2026
00000006

ಹಿರಿಯೂರು :

ಸನ್ಮಾನ್ಯ ಡಿ.ಸುಧಾಕರ್ ರವರು 2008ರಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದ ಸಂದರ್ಭದಲ್ಲಿ ಹಿರಿಯೂರು ತಾಲ್ಲೂಕಿನಲ್ಲಿ ತಮಿಳು ಜನಾಂಗದವರ ಮನವಿಯಂತೆ ಚಿತ್ರದುರ್ಗ ಜಿಲ್ಲೆಯಿಂದ ಕರೂರು ಹಾಗೂ ಕೋಯಮತ್ತೂರುಗಳಿಗೆ ಸರ್ಕಾರಿ ಬಸ್ ಸೌಲಭ್ಯ ಕಲ್ಪಿಸಿಕೊಟ್ಟದ್ದರು,

ಆ ಬಸ್ಸುಗಳು ದುರಸ್ತಿಯಾಗಿರುವ ಕಾರಣದಿಂದ ನಮ್ಮ ಹಿರಿಯೂರು ಬಸ್ ಡಿಪೋ ಉದ್ಘಾಟನೆಗೆ ಆಗಮಿಸಿದ್ದ ಸನ್ಮಾನ್ಯ ಶ್ರೀರಾಮಲಿಂಗಾರೆಡ್ಡಿ ಹಾಗೂ ಡಿ.ಸುಧಾಕರ್ ರವರ ಮುಖಾಂತರ ಹೊಸ ಬಸ್ ಬಿಡಲು ಮನವಿ ಮಾಡಲಾಗಿತ್ತು,

ಇದೀಗ ಸನ್ಮಾನ್ಯ ವೀರೇಂದ್ರಪಪ್ಪಿ ರವರಿಗೆ ತಮಿಳು ಜನಾಂಗದ ಮುಖಂಡರುಗಳು ಪುನಃ ಮನವಿ ಮಾಡಿರುವ ಹಿನ್ನೆಲೆಯಲ್ಲಿ ಎಲ್ಲರ ಸಹಕಾರದಿಂದ ಚಿತ್ರದುರ್ಗರಿಂದ ಕರೂರು ಹಾಗೂ ಕೋಯಮತ್ತೂರು ಮಾರ್ಗಕ್ಕೆ ಹೊಸ ಬಸ್ ಸೌಲಭ್ಯ ಕಲ್ಪಿಸಲಾಗಿದೆ.

ಚಿತ್ರದುರ್ಗದಿಂದ ಕರೂರು ಹಾಗೂ ಕೋಯಮತ್ತೂರು ಮಾರ್ಗವಾಗಿ ಸಂಚರಿಸುವ ಬಸ್ಸಿಗೆ ಚಿತ್ರದುರ್ಗ ಜಿಲ್ಲಾ ಗ್ಯಾರಂಟಿ ಸಮಿತಿಯ ಉಪಾಧ್ಯಕ್ಷರಾದ ಖಾದಿ ರಮೇಶ್ ರವರು ಪೂಜೆ ಮಾಡುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಡಿ.ಸುಧಾಕರ್ ರವರ ಪುತ್ರ ಸುಹಾಸ್ ಸುಧಾಕರ್ ಮಾತನಾಡಿ, ಈ ಮಾರ್ಗದಲ್ಲಿ ಬಸ್ಸು ಸಂಚಾರ ಮಾಡುವುದರಿಂದ ಈ ತಾಲೂಕಿನ ಹಾಗೂ ಜಿಲ್ಲೆಯ ಸಾಕಷ್ಟು ತಮಿಳು ಬಾಂಧವರಿಗೆ ಅನುಕೂಲವಾಗಲಿದೆ, ನಿಮ್ಮ ಪ್ರಯಾಣ ಸುಖಕರವಾಗಲಿ ಎಂಬುದಾಗಿ ಪ್ರಯಾಣಿಕರಿಗೆ ಅವರು ಶುಭಕೋರಿದರು.

ಈ ಸಂದರ್ಭದಲ್ಲಿ ಮಾಜಿ ನಗರಸಭಾ ಅಧ್ಯಕ್ಷರಾದ ಎ.ಮಂಜುನಾಥ್, ರಾಜೇಂದ್ರ, ಮಮತಾ, ಶಿವಕುಮಾರ್, ಈಶ್ವರಪ್ಪ, ನಗರಸಭಾ ಮಾಜಿ ಸದಸ್ಯರಾದ ಜಗದೀಶ್, ಕಬಡ್ಡಿ ರವಿ, ಯುವಕಾಂಗ್ರೆಸ್ ನಗರ ಅಧ್ಯಕ್ಷರಾದ ದರ್ಶನ್, ಜ್ಞಾನೇಶ್, ಅಣ್ಣೇಶ್, ಮದು, ಮಂಜುನಾಥ್ ಇನ್ನು ಅನೇಕ ಮುಖಂಡರು  ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *