July 30, 2026
005

ಹಿರಿಯೂರು :

ಭದ್ರಾ ಮೇಲ್ದಂಡೆ ಯೋಜನೆ ಹಾಗೂ ಧರ್ಮಪುರ ಭಾಗದ ಕೆರೆಗಳಿಗೆ ನೀರು ಹರಿಸಿದ್ದು, ಬಿಜೆಪಿ ಸರ್ಕಾರ   ಎಂಬುದನ್ನು   ಹಿರಿಯೂರು  ತಾಲ್ಲೂಕಿನ ಜನತೆ ಎಂದಿಗೂ ಮರೆಯಬಾರದು, ನೀರಾವರಿ ವಿಚಾರದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಕ್ಕೆ ಇರುವ ಬದ್ಧತೆ ಕಾಂಗ್ರೆಸ್ ಪಕ್ಷಕ್ಕೆ ಇಲ್ಲ ಎಂಬುದಾಗಿ ಸಂಸದ ಗೋವಿಂದಕಾರಜೋಳ ಹೇಳಿದರು. 

ನಗರದ ಹುಳಿಯಾರು ರಸ್ತೆಯಲ್ಲಿ ಭಾನುವಾರ ಎನ್.ಡಿ.ಎ. ಮೈತ್ರಿಕೂಟದ  ಸಂಭಾವ್ಯ ಅಭ್ಯರ್ಥಿ ಶ್ರೀರಾಜಣ್ಣನವರ ನೂತನ ಜನಸಂಪರ್ಕ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಹುಕಾಲ ಆಡಳಿತ ನಡೆಸಿದರು ದೇಶದ ನೀರಾವರಿ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ರೂಪಿಸುವಲ್ಲಿ ವಿಫಲರಾಗಿದ್ದಾರೆ, 2023ರ ನಂತರ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲಾಗದೆ, ರಾಜ್ಯದಲ್ಲಿ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದೆ ಎಂದು ಆರೋಪಿಸಿದ ಅವರು ಮತ್ತೆ 2028ರಲ್ಲಿ ಎನ್.ಡಿ.ಎ ಮೈತ್ರಿಕೂಟ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದರು.  

ಈ ಸಂಧರ್ಭದಲ್ಲಿ ರಾಜ್ಯ ಕಾಡುಗೊಲ್ಲರ ಸಂಘದ ಅಧ್ಯಕ್ಷ ಬಿಬಿಎಂಪಿ ಮಾಜಿ ಸದಸ್ಯ ಬಿಜೆಪಿ ಮುಖಂಡರಾದ   ರಾಜಣ್ಣ, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಮೀಸೆಮಹಾಲಿಂಗಪ್ಪ, ಬಿಜೆಪಿ ಸಹ ಪ್ರಭಾರಿ ಮುರಳಿ, ಬಿಜೆಪಿ ಮುಖಂಡರಾದ  ಎನ್.ಆರ್.ಲಕ್ಷ್ಮಿಕಾಂತ್,  ಮಾಜಿ ಜಿಲ್ಲಾಪಂಚಾಯತ್ ಉಪಾಧ್ಯಕ್ಷರಾದ ಸೈಕಲ್ ರಂಗಸ್ವಾಮಿ, ದ್ಯಾಮೇಗೌಡ, ವಿಶ್ವನಾಥ್, ಜೆ.ಬಿ.ರಾಜಣ್ಣ. ಯುವಮುಖಂಡ ಕಾಡುಗೊಲ್ಲ ಸಮಿತಿ ಸಂಚಾಲಕ ಎನ್.ಧನಂಜಯ, ನಂದಿಹಳ್ಳಿವೇದಮೂರ್ತಿ  ಬಿಜೆಪಿ ಅಲ್ಪಸಂಖ್ಯಾತ ವಿಭಾಗದ  ಅಸ್ಗರ್ ಅಹಮದ್, ಜಿಲ್ಲಾ ಓಬಿಸಿ ಕಾರ್ಯದರ್ಶಿ ಕೇಶವಮೂರ್ತಿ, ಕೆ.ಶಂಕರಮೂರ್ತಿ  ವಕೀಲರಾದ ನಾಗರಾಜ್. ತಿಮ್ಮಣ್ಣ,  ಜನಾರ್ಧನ್,   ಹೇಮದಳದೇವರಾಜ್,  ಕೃಷ್ಣಪ್ಪ, ಸಿದ್ದೇಶ್, ಮುರಳಿಜೆಜಿಹಳ್ಳಿ, ಜಯರಾಮಯ್ಯ, ಶಶಿಕುಮಾರ್, ನಾಗೇಂದ್ರಪ್ಪ,  ಪಾರ್ಥಯಾದವ್, ಗೋಕುಲ್ ಸ್ಟುಡಿಯೋ ಗೋವಿಂದ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *