July 29, 2026
009

ಹಿರಿಯೂರು :

ಕಾಂಗ್ರೆಸ್ ಪಕ್ಷದ ಮುಖಂಡರಾದ ಹರ್ತಿಕೋಟೆ ಗ್ರಾಮದ ಶ್ರೀಗೋಡೆ ತಿಪ್ಪೇಸ್ವಾಮಿ ಅವರು ನಿನ್ನೆ ಹೃದಯಾಘಾತದಿಂದ ನಿಧನರಾದ ಹಿನ್ನೆಲೆಯಲ್ಲಿ, ಇಂದು ಹರ್ತಿಕೋಟೆಯಲ್ಲಿರುವ ಅವರ ನಿವಾಸಕ್ಕೆ ಭೇಟಿ ನೀಡಿದ ಸುಹಾಸ್ ಸುಧಾಕರ್ ರವರು  ಅವರ ಅಂತಿಮ ದರ್ಶನ ಪಡೆದರು.

ಶ್ರೀಗೋಡೆತಿಪ್ಪೇಸ್ವಾಮಿ ಅವರ ಅಗಲಿಕೆ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಸ್ಥಳೀಯ ಜನತೆಗೆ ತುಂಬಲಾರದ ನಷ್ಟವಾಗಿದೆ. ಅವರ ನಿಧನದ ದುಃಖವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಭಗವಂತನು ನೀಡಲಿ. ಶ್ರೀಗೋಡೆ ತಿಪ್ಪೇಸ್ವಾಮಿ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂಬುದಾಗಿ ಅವರು ಸಂತಾಪ ಸೂಚಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *