
ಹಿರಿಯೂರು:
ಅರ್ಜಿ ನಮೂನೆಗಳಿಗೆ ಅತ್ಯಂತ ಸರಳ ಮಾಹಿತಿ ಒದಗಿಸಬೇಕಿದ್ದು, ಈಗಾಗಲೇ ಮತದಾರರ ಬಳಿ ಇರುವ ವೋಟರ್ ಐಡಿ ಸಂಖ್ಯೆ, ಆಧಾರ್ ಸಂಖ್ಯೆ, ಈಗ ವಾಸಿಸುವ ಸರಿಯಾದ ವಿಳಾಸ, ಪೋಷಕರ ಹೆಸರು, ಮತಗಟ್ಟೆ ಸಂಖ್ಯೆ, ಭಾಗದ ಸಂಖ್ಯೆ ನೀಡುವ ಮೂಲಕ ಮತದಾರ ಬಾಂಧವರು ಈ ರಾಷ್ಟ್ರೀಯ ಕಾರ್ಯಕ್ರಮದ ಯಶಸ್ಸಿಗೆ ನೆರವಾಗೋಣ ಎಂಬುದಾಗಿ ನಿವೃತ್ತ ಪ್ರಾಂಶುಪಾಲರಾದ ಎಂ.ಜಿ.ರಂಗಸ್ವಾಮಿ ಹೇಳಿದರು.
ನಗರದ ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಕಾರ್ಯಕ್ರಮ ಮತದಾರರ ವಿಶೇಷ ಸಮಗ್ರ ಪರಿಶೀಲನೆಗೆ ಚಾಲನೆ ನೀಡಿ, ನಂತರ ಅವರು ಮಾತನಾಡಿದರು.

ನಗರದ ಎಲ್ಲಾ 18 ವರ್ಷ ಮೇಲ್ಪಟ್ಟ ಅರ್ಹ ಮತದಾರರು ತಮ್ಮ ಮನೆಗಳಿಗೆ ಬರುವ ಬಿಎಲ್ಓ ಗಳಿಗೆ ತಪ್ಪದೆ ನಿಗದಿತ ಮಾಹಿತಿ ನೀಡುವ ಮೂಲಕ 2026ರ ಮತದಾರರ ಪಟ್ಟಿಗೆ ತಮ್ಮ ಹೆಸರನ್ನು ನೋಂದಾಯಿಸಿ ಕೊಳ್ಳಬೇಕು ಎಂಬುದಾಗಿ ನಗರಸಭೆ ಪೌರಾಯುಕ್ತರಾದ ಎ.ವಾಸಿಂ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ನಗರದ ಮತಗಟ್ಟೆ ಸಂಖ್ಯೆ 170 ರಲ್ಲಿ ನಿವೃತ್ತ ಪ್ರಾಂಶುಪಾಲ ಎಂ.ಜಿ. ರಂಗಸ್ವಾಮಿ ಅವರ ಹೆಸರು ನೋಂದಾಯಿಸುವ ಮೂಲಕ ಇದು ರಾಷ್ಟ್ರೀಯ ಕಾರ್ಯಕ್ರಮ ಆಗಿದ್ದು ಬಿಎಲ್.ಓ ಗಳು ನೀಡುವ ಎರಡು ನಿಗದಿತ ಅರ್ಜಿ ನಮೂನೆಗಳನ್ನು ಸೂಕ್ತ ಮಾಹಿತಿಯೊಂದಿಗೆ ಭರ್ತಿ ಮಾಡಿ ಒಂದನ್ನು ತಮ್ಮ ಬಳಿ ಉಳಿಸಿಕೊಂಡು ಮತ್ತೊಂದು ಅರ್ಜಿಯನ್ನು ಬಿಎಲ್ ಜೊತೆಗೆ ನೀಡಬೇಕು.

ಯಾವುದೇ ಅರ್ಹ ಮತದಾರರು ಹಾಗೂ ಮನೆಯ ಯಾರೊಬ್ಬರೂ ಮತದಾರರ ಪಟ್ಟಿಯಿಂದ ಹೊರಗೆ ಉಳಿಯದಂತೆ ಸಾರ್ವಜನಿಕರು, ಸಂಘಸಂಸ್ಥೆಗಳ ಕಾರ್ಯಕರ್ತರು ಈ ಕಾರ್ಯಕ್ಕೆ ನೆರವು ನೀಡಬೇಕು ಎಂಬುದಾಗಿ ಈ ಮೂಲಕ ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ನಗರಸಭೆ ಸಿಬ್ಬಂದಿ ಕಂದಾಯ ನಿರೀಕ್ಷಕರಾದ ಜುನೇದ್ ಸಿರಾಜ್,ಮೊಹಮ್ಮದ್ ಹಸ್ರತುಲ್ಲ, ತಾಲ್ಲೂಕು ಕಛೇರಿ ಚುನಾವಣಾ ಶಾಖೆ ಸಿಬ್ಬಂದಿ ಮಧು ಇತರರು ಉಪಸ್ಥಿತರಿದ್ದರು.
