July 29, 2026
003

ಹಿರಿಯೂರು :

ರಾಜ್ಯದ ಮತದಾರರಲ್ಲಿ ಆತಂಕದ ವಾತಾವರಣವನ್ನುಂಟುಮಾಡಿ, ಇದೇ ತಿಂಗಳು 30 ರಿಂದ ವಿಶೇಷ ತೀವ್ರ ಪರಿಷ್ಕರಣೆ ಎಂಬ ಅರ್ಥರಹಿತ ಕಾರ್ಯವನ್ನು ಪ್ರಾರಂಭ ಮಾಡಲಿರುವ ಚುನಾವಣಾ ಆಯೋಗದ ಕ್ರಮವನ್ನು ವಿರೋಧಿಸುತ್ತಿದ್ದೇನೆ” ಎಂಬುದಾಗಿ ಖ್ಯಾತ ಕಾದಂಬರಿಕಾರ ಡಿ.ಸಿ.ಪಾಣಿ ಇಂದು ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

“ಮತದಾರರ ಪಟ್ಟಿ ಪರಿಷ್ಕರಣೆಗೆ ನಮ್ಮ ವಿರೋಧ ಇಲ್ಲ. ಆದರೇ, ತರ್ಕರಹಿತ ನಿಯಮಗಳನ್ನು ಕೈ ಬಿಡಬೇಕೆಂದು ಈ ಮೂಲಕ ಒತ್ತಾಯಿಸುತ್ತಿದ್ದೇನೆ. ತಪ್ಪಿದ್ದಲ್ಲಿ, ತಾಲೂಕಿನ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಜೊತೆ ಚರ್ಚಿಸಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗುವುದು. ” ಎಂದು ಅವರು ಚುನಾವಣಾ ಆಯೋಗಕ್ಕೆ ಎಚ್ಚರಿಸಿದ್ದಾರೆ.

“ಜನ್ಮ ಸಿದ್ಧ ಹಕ್ಕುಗಳಾದ ಪೌರಾತ್ವ ಹಾಗು ಮಾತದಾನಗಳನ್ನು ನಿಯಮಗಳ ರೂಪದಲ್ಲಿ ಕಿತ್ತಿಕೊಳ್ಳುವ ಪ್ರಯತ್ನ ಸಂವಿಧಾನಬಾಹಿರ.” ಎಂದು ನಿಷ್ಠುರವಾಗಿ ಹೇಳಿದ ಪಾಣಿ,” ವಿಶೇಷ ತೀವ್ರ ಪರಿಷ್ಕರಣೆಯಿಂದ ರಾಜ್ಯದಲ್ಲಿ ಉಂಟಾಗಲಿರುವ ಅನಾಹುತಗಳಿಗೆ ಚುನಾವಣಾ ಆಯೋಗ ಹಾಗು ಕೇಂದ್ರ ಸರ್ಕಾರಗಳೇ ಹೊಣೆಗಾರಿಕೆ ವಹಿಸಿಬೇಕಾಗುತ್ತದೆ ” ತಿಳಿಸಿದ್ದಾರೆ.

About The Author

Leave a Reply

Your email address will not be published. Required fields are marked *