July 29, 2026
000001

ಹಿರಿಯೂರು :

ಬೆಂಗಳೂರುನಗರವನ್ನು ನಿರ್ಮಾಣ ಮಾಡಿದಂತಹ ನಾಡಪ್ರಭು ಕೆಂಪೇಗೌಡರು ಈ ನಾಡು ಕಂಡಂತ ಮಹಾನ್ ನಾಯಕರಾಗಿದ್ದು, ಇಂದಿನ ವಿದ್ಯಾರ್ಥಿಗಳು ಕೆಂಪೇಗೌಡರವರ ಆಡಳಿತ ವೈಖರಿ ಮತ್ತು ಸುಧಾರಣೆಗಳ ಬಗ್ಗೆ ತಿಳಿಯಬೇಕೆಂಬ ಉದ್ದೇಶದಿಂದ ರಾಜ್ಯಾದ್ಯಂತ ಎಲ್ಲಾ ಶಾಲಾ ಕಾಲೇಜುಗಳಲ್ಲಿ “ನಾಡಪ್ರಭು ಕೆಂಪೇಗೌಡರಜಯಂತಿ” ಆಚರಣೆ ಮಾಡಲಾಗುತ್ತಿದೆ ಎಂಬುದಾಗಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಆಲೂರು ಹನುಮಂತರಾಯಪ್ಪ ಹೇಳಿದರು.

ನಗರದ ವಾಣಿವಿಲಾಸ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ “ನಾಡಪ್ರಭು ಕೆಂಪೇಗೌಡ”ರ 517 ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪನಮನವನ್ನು ಸಲ್ಲಿಸಿ, ನಂತರ ಅವರು ಮಾತನಾಡಿದರು.

ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಆಡಳಿತಗಾರರಾಗಿದ್ದ ಕೆಂಪೇಗೌಡರು ಬೆಂಗಳೂರಿನ ಸುತ್ತಲು ನಾಲ್ಕು ಗೋಪುರಗಳನ್ನು ಕಟ್ಟಿದ್ದು, ಅವುಗಳು ಇಂದಿನ ಬೆಂಗಳೂರಿನ ಗಡಿಗಳನ್ನು ಸೂಚಿಸುತ್ತದೆ, ರೈತರ ಅನುಕೂಲಕ್ಕಾಗಿ ಸುಮಾರು 600 ಕ್ಕೂ ಹೆಚ್ಚು ಕೆರೆಕಟ್ಟೆಗಳನ್ನು ಕಟ್ಟಿದರಲ್ಲದೆ, ಮಾರುಕಟ್ಟೆಗಳನ್ನು ಸ್ಥಾಪಿಸುವ ಮೂಲಕ ವಾಣಿಜ್ಯೋದ್ಯಮವನ್ನು ಅಭಿವೃದ್ಧಿಪಡಿಸಿದರು, ಇವರ ಆಡಳಿತ ಇಂದಿನ ರಾಜಕೀಯ ನಾಯಕರುಗಳಿಗೆ ಸ್ಪೂರ್ತಿಯಾಗಬೇಕಿದೆ ಎಂಬುದಾಗಿ ಹೇಳಿದರು.

ಉಪನ್ಯಾಸಕಿ ಶ್ರೀಮತಿ ಗಂಗಮ್ಮ ಮಾತನಾಡಿ, ಬೆಂಗಳೂರು ಸಿಲಿಕಾನ್ ಸಿಟಿಯಾಗಿ ಬೃಹದಾಕಾರವಾಗಿ ಬೆಳೆಯುತ್ತಿದ್ದು, ಇಂದು ಸಾವಿರಾರು ಜನರು ಉದ್ಯೋಗ ಅರಸಿ ಬೆಂಗಳೂರಿಗೆ ಬರುವಷ್ಟರ ಮಟ್ಟಿಗೆ ಔದ್ಯೋಗಿಕ ಕ್ಷೇತ್ರವು ಅಭಿವೃದ್ಧಿಯಾಗಿದ್ದು, ಜಗತ್ತಿನ ಎಲ್ಲಾ ದೇಶಗಳು ಬೆಂಗಳೂರಿನತ್ತ ತಿರುಗಿ ನೋಡುವಂತೆ ಮಾಡಿದ ಕೀರ್ತಿ ನಾಡಪ್ರಭು ಕೆಂಪೇಗೌಡರಿಗೆ ಸಲ್ಲುತ್ತದೆ ಎಂಬುದಾಗಿ ಹೇಳಿದರು.

ಉಪನ್ಯಾಸಕ ಉಮೇಶ್ ಯಾದವ್ ಮಾತನಾಡಿ, ರಾಜ್ಯದ ರೈತರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದು, ಅವರ ಆಡಳಿತದ ಅವಧಿಯಲ್ಲಿ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬೆಂಗಳೂರು ಸುತ್ತಮುತ್ತ ಸುಮಾರು 600 ಕೆರೆಗಳನ್ನು ನಿರ್ಮಾಣ ಮಾಡುವುದರ ಜೊತೆಗೆ ವ್ಯಾಪಾರ-ವ್ಯವಹಾರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದರು. ಆದ್ದರಿಂದಲೇ ಬೆಂಗಳೂರು ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗೊಳ್ಳಲು ಕಾರಣವಾಯಿತು ಎಂಬುದಾಗಿ ಹೇಳಿದರು.

ಈ ಕಾರ್ಯಕ್ರಮದಲ್ಲಿ ಹಿರಿಯಪತ್ರಕರ್ತರಾದ ಪಿ.ಆರ್.ಸತೀಶ್ ಬಾಬು, ವಿದ್ಯಾಸಂಸ್ಥೆಯ ಮುಖ್ಯಶಿಕ್ಷಕರಾದ ಶ್ರೀಮತಿ ಸೌಮ್ಯ, ವ್ಯವಸ್ಥಾಪಕಿ ಶ್ರೀಮತಿ ವಸಂತಾ, ಆಡಳಿತಾಧಿಕಾರಿ ಶ್ರೀಮತಿ ಹೇಮಲತಾ, ಶಿಕ್ಷಕಿಯರುಗಳಾದ ರಜಿಯಾ, ರಂಜಿತಾ, ಸಬೀಹಾ, ಮುಬೀನಾ, ಸಾಧಿಕಾ, ಮಮತಾ, ಅಕ್ಷಿತಾ, ಸುಲೋಚನಾ, ಖುಷಿ, ಅಫ್ರೀನ್, ಕಾರ್ಯಕ್ರಮ ಸಂಯೋಜಕರಾದ ಪೂಜಾ, ಜಯಸುಧಾ, ಸೇರಿದಂತೆ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *