
ಹಿರಿಯೂರು :
ವಾಣಿವಿಲಾಸ ಜಲಾಶಯದಿಂದ ನೀರು ಪೂರೈಸುವ 300ಎಂಎಂ ರೇಸಿಂಗ್ ಮ್ಯಾನ್ ವಾಲ್ ಚೆಕ್ ನಟ್ ದುರಸ್ತಿಯಾಗಿರುವ ಕಾರಣ ಜೂನ್ 25 ರಂದು ವಿವಿ ಸಾಗರದಲ್ಲಿ ಬೆಳಿಗ್ಗೆ 10:00 ಗಂಟೆ ಯಿಂದ ಸಂಜೆ 5:00 ಗಂಟೆ ವರೆಗೆ ಕರೆಂಟ್ ಇಲ್ಲದಿರುವ ಕಾರಣ ಈ ದಿನ ಬಾಕಿ ಇರುವ ಪ್ರದೇಶಗಳಲ್ಲಿ ನಾಳೆ ನೀರು ಸರಬರಾಜು ಮಾಡಲಾಗುವುದು ಎಂಬುದಾಗಿ ನಗರಸಭೆ ಪೌರಾಯುಕ್ತರಾದ ಎ.ವಾಸೀಂ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ನಾಳೆ ಬಾಕಿ ಇರುವ ಪ್ರದೇಶಗಳಲ್ಲಿ ನಾಡಿದ್ದು ನೀರು ಸರಬರಾಜು ಮಾಡಲಾಗುವುದು , ನಾಡಿದ್ದು ಬಾಕಿ ಇರುವ ಪ್ರದೇಶಗಳಲ್ಲಿ ಅಚೆನಾಡಿದ್ದು ನೀರು ಸರಬರಾಜು ಮಾಡಲಾಗುವುದು ಒಂದು ದಿನ ನೀರಿನ ವ್ಯತ್ಯಾಸ ಉಂಟಾಗುವುದರಿಂದ ನಗರಸಭೆಯೊಂದಿಗೆ ಸಾರ್ವಜನಿಕರು ಸಹಕರಿಸಬೇಕು ಎಂಬುದಾಗಿ ನಗರಸಭೆ ಪೌರಾಯುಕ್ತರಾದ ಎ.ವಾಸೀಂ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
