
ಹಿರಿಯೂರು :
ಶ್ರೀಯುತ ಶಶಿಕುಮಾರ್ ರವರ ಸೇವಾನಿಷ್ಠೆ, ಪ್ರಾಮಾಣಿಕತೆ, ಹಾಗೂ ಅತ್ಯುತ್ತಮ ಕಾರ್ಯಕ್ಷಮತೆಯನ್ನು ಗುರುತಿಸಿ, ಡಿ.ಜಿ.ಮತ್ತು ಐಜಿಪಿ ಸಾಹೇಬರ ಪದಕವನ್ನು ನೀಡಿ, ಗೌರವಿಸಲಾಗಿದೆ. ಶ್ರೀಯುತ ಶಶಿಕುಮಾರ್ ರವರಿಗೆ “ಹಿರಿಯೂರುನ್ಯೂಸ್” ತಂಡದ ಮುಖ್ಯಸ್ಥರು ಹಾಗೂ ರಾಜ್ಯ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಾದ ಆಲೂರುಹನುಮಂತರಾಯಪ್ಪ,ಅಭಿನಂದನೆಗಳನ್ನು ತಿಳಿಸಿದ್ದಾರೆ.
ಡಿ.ಜಿ.ಮತ್ತು ಐಜಿಪಿ ಸಾಹೇಬರ ಪದಕಕ್ಕೆ ಭಾಜನರಾಗಿರುವ ಶ್ರೀಯುತ ಶಶಿಕುಮಾರ್ ರವರು ಹಿರಿಯೂರು ತಾಲ್ಲೂಕಿನ ಪಿಟ್ಲಾಲಿ ಗ್ರಾಮದ ಕೃಷಿಕ ಕುಟುಂಬದ ಗ್ರಾಮೀಣ ಪ್ರತಿಭೆಯಾಗಿದ್ದು, ಅತ್ಯಂತ ಸ್ನೇಹಮಯ ಹಾಗೂ ಜನಸ್ನೇಹಿ ಪೋಲೀಸ್ ಅಧಿಕಾರಿಯಾಗಿದ್ದಾರೆ. ಇವರಿಗೆ “ಹಿರಿಯೂರುನ್ಯೂಸ್” ತಂಡದ ವತಿಯಿಂದ ಹಿರಿಯ ಪತ್ರಕರ್ತರಾದ ಪಿ.ಆರ್.ಸತೀಶ್ ಬಾಬು, ಗೋಸಿಕೆರೆರಂಗನಾಥ್, ಶ್ರೀಪಾದ್ ವಸಿಷ್ಠ, ಉಮೇಶ್ ಯಾದವ್, ಶಿವರಾಜ್ ನಾಯಕ್, ಪರಮೇಶ್ವರಪ್ಪ, ಇರ್ಫಾನ್ ವುಲ್ಲಾ, ಇದಾಯತ್ ವುಲ್ಲಾ ಇವರುಗಳು ಶುಭಹಾರೈಸಿದ್ದಾರೆ.
