
ಹಿರಿಯೂರು :
ಗೂಳ್ಯದ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀಯುತ ಪಿ.ಲಿಂಗರಾಜುರವರು ಕರ್ನಾಟಕ ರಾಜ್ಯ ಹಳ್ಳಿಕಾರ್ ಯುವಕರ ಸಂಘದ ಬೆನ್ನೆಲುಬಾಗಿ ಅನೇಕ ವರ್ಷಗಳಿಂದ ತಮ್ಮ ಒತ್ತಡದ ಕೆಲಸದ ಜೊತೆಗೆ ಹಳ್ಳಿಕಾರ್ ಜನಾಂಗದ ಸೇವೆಯನ್ನು ಸಹ ಮಾಡಿಕೊಂಡು ಬಂದಿರುತ್ತಾರೆ,
ಇವರ ಜನಾಂಗದ ಸೇವೆಯನ್ನು ಗುರುತಿಸಿ ಕರ್ನಾಟಕ ರಾಜ್ಯ ಹಳ್ಳಿಕಾರ್ ಯುವಕರ ಸಂಘದ ನಿರ್ದೇಶಕರನ್ನಾಗಿ ಎಲ್ಲಾ ಪದಾಧಿಕಾರಿಗಳು ಒಪ್ಪಿಗೆ ಸೂಚಿಸಿ ಶ್ರೀಯುತ ಪಿ.ಲಿಂಗರಾಜುರವರನ್ನು ಆಯ್ಕೆಮಾಡಿದ್ದಾರೆ.
