May 31, 2026
004

ಹಿರಿಯೂರು :

ದುಬಾರಿ ಸಾಕಾನೆಗಳ ಕಾದಾಟಗಳ ನಡುವೆ ಸಿಲುಕಿ ಮೃತಪಟ್ಟ ತುಳಸಿ ಎಂಬ ಪ್ರವಾಸ ಮಹಿಳೆಯ ಗಂಡ ಜೋಯೆಲ್ ರವರು ದುಃಖದ ಮಡುವಿನಲ್ಲಿ ತಮ್ಮ ಪತ್ನಿಯ ಕಣ್ಣುಗಳನ್ನು ದಾನ ಮಾಡುವುದರ ಮೂಲಕ ಇಡೀ ಮನುಕುಲಕ್ಕೆ ಮಾದರಿಯಾಗಿದ್ದಾರೆ ಎಂಬುದಾಗಿ ಪುನೀತ್ ರಾಜಕುಮಾರ್ ಸೇವಾ ಸಂಸ್ಥೆಯ ಅಧ್ಯಕ್ಷ ಕೇಶವಮೂರ್ತಿ ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು ಮೃತಪತ್ನಿಯ ಪತಿ ಜೋಯೆಲ್ ತಮ್ಮ ಪತ್ನಿಯ ಇಡೀ ದೇಹವನ್ನು ದಾನ ಮಾಡಲು ಮುಂದಾಗಿದ್ದಾರೆ, ಅವರು ಆನೆಯ ದಾಳಿಗೆ ಸಿಲುಕಿರುವ ಮೃತ ತುಳಸಿಯ ದೇಹದ ಅಂಗಾಂಗಗಳ ನುಚ್ಚುಗುಜ್ಜ ಆಗಿರುವುದರಿಂದ ವೈದ್ಯರು ನಿರಾಕರಿಸಿದಾಗ ಪತ್ನಿಯ ಕಣ್ಣುಗಳನ್ನು ದಾನ ಮಾಡಿ ಬೇರೆಯವರ ಮೂಲಕ ತಮ್ಮ ಪತ್ನಿ ಬದುಕಿರಲಿ ಎಂದು ಬಯಸಿರುವುದು ಶ್ಲಾಘನೀಯ ಹಾಗೂ ಸಮಾಜಕ್ಕೆ ಮಾದರಿಯಾಗಿದೆ ಎಂದಿದ್ದಾರೆ.

ಈ ಕಾಡಾನೆ ದಾಳಿಗೆ ಬಲಿಯಾದ ಕೇರಳದ ವ್ಯಕ್ತಿಗೆ ನೀಡಿದ್ದಷ್ಟೇ ಪರಿಹಾರದ ಮೊತ್ತವನ್ನು ಮೃತರ ವಾರಸುದಾರರಿಗೆ ನೀಡಬೇಕು, ಪ್ರವಾಸಿ ಸ್ಥಳದಲ್ಲಿ ಪ್ರವಾಸಿಗರಿಗೆ ಸೂಕ್ತ ರಕ್ಷಣೆ ನೀಡಬೇಕು,ತಾತ್ಕಲಿಕ ಪ್ರಾಥಮಿಕ ಚಿಕಿತ್ಸಾ ಕೇಂದ್ರ ಹಾಗೂ ಸೂಕ್ತವಾದ ಆಂಬುಲೆನ್ಸ್ ಗಳ ವ್ಯವಸ್ಥೆಗಳನ್ನು ಒದಗಿಸಬೇಕು ಎಂಬುದಾಗಿ ಕೇಶವಮೂರ್ತಿ ರಾಜ್ಯ ಸರ್ಕಾರಕ್ಕೆ ಆಗ್ರಹಪೂರ್ವಕ ಒತ್ತಾಯ ಮಾಡಿದ್ದಾರೆ.

About The Author

Leave a Reply

Your email address will not be published. Required fields are marked *