
ಹಿರಿಯೂರು :
ನಗರದ ಜೈನ ಶ್ವೇತಾಂಬರ ದೇವಸ್ಥಾನದ ಹತ್ತಿರದ ನಗರಸಭೆಯ ನೀರು ಸರಬರಾಜು ಬೋರ್ವೆಲ್ ಯಾವುದೋ ಒಂದು ರೀತಿ ತೊಂದರೆಗೆ ಒಳಗಾಗುತ್ತಿದ್ದು, ಇದರಿಂದ ಈ ಭಾಗದ ನಿವಾಸಿಗರಿಗೆ ಬಹಳ ತೊಂದರೆಯಾಗುತ್ತಿದೆ ಎಂಬುದಾಗಿ ಇಲ್ಲಿನ ನಿವಾಸಿಗಳು ಹಿರಿಯೂರು ನ್ಯೂಸ್ ತಂಡಕ್ಕೆ ತಮ್ಮ ಸಮಸ್ಯೆಯನ್ನು ತಿಳಿಸಿದ್ದಾರೆ.
ಈ ಬೋರ್ವೆಲ್ ನೀರು ಇಲ್ಲಿನ ನಿವಾಸಿಗರ ಸುಮಾರು ಮನೆಗಳಿಗೆ ಪ್ರತಿದಿನ ನೀರು ಸರಬರಾಜು ಆಗುತ್ತದೆ, ಪ್ರತಿದಿನ ಎರಡು ಅಥವಾ ಮೂರು ಬಾರಿ ಬೋರ್ ಆನ್ ಮಾಡಿದರೆ ದಿನನಿತ್ಯ ಬಳಕೆ ಆಗುವ ನೀರು ಸರಬರಾಜಿಗೆ ತೊಂದರೆ ಇರುವುದಿಲ್ಲ, ಆದರೆ ಈ ಬೋರ್ವೆಲ್ ತೊಂದರೆಯಾದರೆ ಇದು ಸರಿಪಡಿಸಲು ಎರಡರಿಂದ ಮೂರು ದಿನ ಆಗುತ್ತದೆ ಅಥವಾ ಎರಡು ದಿನಗಳಾದರೂ ಸರಿ ಹೋಗುವುದಿಲ್ಲ ಇದರಿಂದಾಗಿ ಇಲ್ಲಿನ ನಿವಾಸಿಗರಿಗೆ ತೊಂದರೆಯಾಗುತ್ತಿದೆ.
ಏನಾದರೂ ಬೋರ್ ತೊಂದರೆ ಆದರೆ ಬೇರೆ ಯಾವ ಪರ್ಯಾಯ ವ್ಯವಸ್ಥೆ ಇರುವುದಿಲ್ಲ, ಈಗಲೂ ಸಹ ಮೂರು ದಿನ ಆಗಿದೆ ಬೋರ್ವೆಲ್ ರಿಪೇರಿಯಲ್ಲಿದೆ ಆದರೆ ಯಾವುದೇ ನೀರಿನ ವ್ಯವಸ್ಥೆ ಆಗಿರುವುದಿಲ್ಲ ಈ ರೀತಿಯ ಪ್ರತಿಬಾರಿಯೂ ತೊಂದರೆಗಳನ್ನು ದೂರ ಮಾಡಬಹುದೆಂಬ ಎಂಬ ನಂಬಿಕೆಯಲ್ಲಿ “ಹಿರಿಯೂರು ನ್ಯೂಸ್” ನೊಂದಿಗೆ ತಮ್ಮ ಅಳಲು ಹೇಳಿಕೊಂಡಿದ್ದಾರೆ.
ಈ ಕೂಡಲೇ ನಗರಸಭೆ ನಗರಸಭೆ ಮುಖ್ಯ ಇಂಜಿನಿಯರ್ ಗಳಾಗಲಿ ಮೇಲ್ಪಟ್ಟದ ಅಧಿಕಾರಿಗಳಾಗಲಿ ಈ ತೊಂದರೆ ನಿವಾರಿಸಿ, ಇಲ್ಲಿನ ನಿವಾಸಿಗರ ಅಳಲನ್ನು ಅರಿತು ಪ್ರತಿ ಬಾರಿಯೂ ತೊಂದರೆ ಆಗುವ ಈ ಬೋರ್ವೆಲ್ ಸರಿಪಡಿಸಲು ಮುಂದಾಗಬೇಕು ಎಂಬುದಾಗಿ “ಹಿರಿಯೂರುನ್ಯೂಸ್” ತಂಡದ ಮುಖ್ಯಸ್ಥರಾದ ಆಲೂರು ಹನುಮಂತರಾಯಪ್ಪ ಇಲ್ಲಿನ ನಿವಾಸಿಗರ ಪರವಾಗಿ ಮನವಿ ಮಾಡಿದ್ದಾರೆ.
