May 31, 2026
005

ಹಿರಿಯೂರು :

ನಗರದ ಮದ್ರಸಾ ಜಾಮಿಯಾ ಫರೂಕಿಯಾ ಸಂಸ್ಥೆಯ ಸಂಸ್ಥಾಪಕರು ಹಾಗೂ ಮಸೀದಿ-ಇ ಬಿಲಾಲ್ ಹಿರಿಯೂರು ಇದರ ಸಂಸ್ಥಾಪಕರು ಹಾಗೂ ಮುಖ್ಯಸ್ಥರು ಹಾಗೂ ಮುಸ್ಲಿಂ ಜನಾಂಗದ ಹಿರಿಯ ಮುಖಂಡರಾದ ಹಾಜಿ ಶಫಿವುಲ್ಲಾ ಸಾಬ್ ರವರು ಇಂದು ಹೃದಯಾಘಾತದಿಂದ ಆಕಸ್ಮಿಕ ನಿಧನರಾಗಿದ್ದು, ಶ್ರೀಯುತ ಹಾಜಿ ಶಫಿವುಲ್ಲಾ ಸಾಬ್ ರವರ ನಿಧನಕ್ಕೆ “ಹಿರಿಯೂರುನ್ಯೂಸ್” ತಂಡದ ವತಿಯಿಂದ ಭಾವಪೂರ್ಣಶ್ರದ್ಧಾಂಜಲಿ ಅರ್ಪಿಸಲಾಗಿದೆ.

ಶ್ರೀಯುತ ಹಾಜಿ ಶಫಿವುಲ್ಲಾ ಸಾಬ್ ರವರು ಸ್ವತಃ ಕೃಷಿಕರು ಹಾಗೂ ಪ್ರಗತಿಪರ ರೈತರಾಗಿದ್ದರು, ಅಲ್ಲದೆ ತಾಲ್ಲೂಕಿನ ನೀರಾವರಿ ಹೋರಾಟ ಸಮಿತಿ ಸದಸ್ಯರಾಗಿದ್ದು, ಅನೇಕ ನೀರಾವರಿ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು, ಅಲ್ಲದೆ ವಾಣಿವಿಲಾಸ ಜಲಾಶಯಕ್ಕೆ ನೀರು ಹರಿಸುವ ಹೋರಾಟಗಳಲ್ಲಿ ಹೋರಾಟಗಾರರಿಗೆ ಎಲ್ಲಾ ರೀತಿಯಿಂದ  ಬೆಂಬಲವಾಗಿ ನಿಂತಿದ್ದರು, ತಾಲ್ಲೂಕಿನ ಅಭಿವೃದ್ಧಿಯ ಬಗ್ಗೆ ಹಾಗೂ ಸಾರ್ವಜನಿಕರ ಹಿತಾಸಕ್ತಿಯ ಬಗ್ಗೆ ಅತ್ಯಂತ ಕಾಳಜಿ ಹೊಂದಿದ್ದ ವ್ಯಕ್ತಿಯಾಗಿದ್ದರು ಎಂಬುದಾಗಿ ಹಿರಿಯ ಪತ್ರಕರ್ತರಾದ ಆಲೂರುಹನುಮಂತರಾಯಪ್ಪರವರು ಅವರನ್ನು ಸ್ಮರಿಸಿದ್ದಾರೆ.

ನಗರದ ಮುಸ್ಲಿಂ ಜನಾಂಗದ ಹಿರಿಯ ಮುಖಂಡರಾದ ಹಾಜಿ ಶಫಿವುಲ್ಲಾ ಸಾಬ್ ರವರ ನಿಧನದ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗದವರಿಗೆ ಆ ಭಗವಂತನು ದಯಪಾಲಿಸಲಿ ಎಂಬುದಾಗಿ “ಹಿರಿಯೂರು ನ್ಯೂಸ್” ತಂಡದ ಮುಖ್ಯಸ್ಥರು, ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷರು ಹಾಗೂ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಾದ ಆಲೂರುಹನುಮಂತರಾಯಪ್ಪರವರು ಹಾಗೂ ಹಿರಿಯ ಪತ್ರಕರ್ತರುಗಳಾದ ಪಿ.ಆರ್.ಸತೀಶ್ ಬಾಬು, ಗೋಸಿಕೆರೆ ರಂಗನಾಥ್ ಕೇಶವಮೂರ್ತಿ, ಶ್ರೀಪಾದ್ ವಸಿಷ್ಠ, ಶಿವರಾಜ್ ನಾಯಕ್, ಉಮೇಶ್, ಯಾದವ್, ಪರಮೇಶ್ವರಪ್ಪ, ಇರ್ಫಾನ್ ವುಲ್ಲಾ, ಹಿದಾಯತ್ ವುಲ್ಲಾ ಇವರುಗಳು ಸಂತಾಪ ಸೂಚಿಸಿದ್ದಾರೆ.

About The Author

Leave a Reply

Your email address will not be published. Required fields are marked *