
ಹಿರಿಯೂರು :
ವಾಸವಿಜಯಂತಿ ಪ್ರಯುಕ್ತ ವಾಸವಿದೇವಿಗೆ ಕ್ಷೀರಾಭಿಷೇಕ, ಗೋಪೂಜೆ, ವಾಸವಿ ತುಲಾಭಾರ ಸೇವೆ, ಆರ್ಯವೈಶ್ಯಕುಲ ಮಹಿಳೆಯರಿಂದ ಲಕ್ಷ ಕುಂಕುಮಾರ್ಚನೆ, ದೀಕ್ಷಾಸಮಿತಿಯಿಂದ ಮಕ್ಕಳಿಗೆ ಅಕ್ಷರಾಭ್ಯಾಸ, ವಾಸವಿ ಯುವತಿ ಸಂಘದಿಂದ 250 ಮಹಿಳೆಯರಿಗೆ ಮಡಿಲಕ್ಕಿ ಕಾರ್ಯಕ್ರಮ ಹೀಗೆ ಹಲವಾರು ಕಾರ್ಯಕ್ರಮಗಳನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ ಎಂಬುದಾಗಿ ಆರ್ಯವೈಶ್ಯ ಮಂಡಳಿಯ ಅಧ್ಯಕ್ಷರಾದ ಕೆ.ವಿ.ಸತ್ಯನಾರಾಯಣ ಹೇಳಿದರು.

ನಗರದ ಶ್ರೀಕನ್ಯಕಾ ಪರಮೇಶ್ವರಿ ದೇವಸ್ಥಾನದಲ್ಲಿ ಆರ್ಯವೈಶ್ಯಮಂಡಳಿ ಅಂಗಸಂಸ್ಥೆಗಳು, ಆರ್ಯವೈಶ್ಯ ಕುಲಬಾಂಧವರಿಂದ ಹಮ್ಮಿಕೊಳ್ಳಲಾಗಿದ್ದ ಅದ್ದೂರಿ ವಾಸವಿ ಜಯಂತೋತ್ಸವ ಹಾಗೂ ವಾಸವಿದೇವಿಯ ಮೆರವಣಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವಾಸವಿ ಜಯಂತಿ ಪ್ರಯುಕ್ತ ಬೆಳಗ್ಗೆ ವಾಸವಿದೇವಿಗೆ ಸುಪ್ರಭಾತ, ಗಂಗೆಪೂಜೆ, ಗಣೇಶ ಪೂಜೆ, ಕಳಸಗಳಿಗೆ ವಿಶೇಷಪೂಜೆ, ಮತ್ತು ಗೋಪುರಸ್ಥಾಪನೆ, ವಾಸವಿಗೆ ಕುಲಮಾತೆಯವರಿಂದ ತಂಬಿಟ್ಟಿನ ಆರತಿ, ವಾಸವಿಗೆ ಯಜ್ಞ ಹೋಮಗಳು, ವಾಸವಿ ಗೋಪುರಕಳಸಸ್ಥಾಪನೆ, ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದೇವೆ ಎಂಬುದಾಗಿ ಹೇಳಿದರು.

ಕಾರ್ಯದರ್ಶಿ ಪಿ.ವಿ.ನಾಗರಾಜ್ ಮಾತನಾಡಿ,ವಾಸವಿಗೆ 300ಜನ ಸುಮಂಗಲಿಯರಿಂದ ಕುಂಬಾರತಿ, ವೇದ ಪುರೋಹಿತರಿಂದ ಗಂಗಾವತಿ, ಜೊತೆಗೆ ಕುಲಬಾಂಧವರಿಗೆ ಮತ್ತು ಮಕ್ಕಳಿಗೆ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ, ಈ ಕಾರ್ಯಕ್ರಮಗಳ ಯಶಸ್ಸಿಗೆ ಕಾರಣರಾದ ಎಲ್ಲಾ ಆರ್ಯವೈಶ್ಯ ಕುಲಬಾಂಧವರಿಗೆ ಅಭಿನಂದನೆಗಳು ಎಂಬುದಾಗಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ಆರ್ಯವೈಶ್ಯ ಮಂಡಳಿಯ ಗೌರವಾಧ್ಯಕ್ಷರಾದ ಎಲ್.ಆನಂದಶೆಟ್ಟಿ, ಉಪಾಧ್ಯಕ್ಷರಾದ ಕೆ.ವಿ.ಅಮರೇಶ್, ಖಜಾಂಚಿ ಮಂಜುನಾಥ್, ರಾಜಕುಮಾರ್, ಕೆಕೆಎಸ್ ಮಂಜು, ಪುರುಷೋತ್ತಮ್, ಈ.ರಮೇಶ್ ಬಾಬು, ಪಿ.ಆರ್.ಸತೀಶ್ ಬಾಬು, ಆರ್.ಅನಂತಕುಮಾರ್, ಆರ್.ಪ್ರಕಾಶ್ ಕುಮಾರ್, ಶ್ರೀಧರ್, ಹರಿಪ್ರಸಾದ್, ವೆಂಕಟಾಚಲಶೆಟ್ಟಿ, ಯುವಜನ ಸಂಘದ ಜಗದೀಶ್ ತಂಡ, ಮಹಿಳಾ ಮಂಡಳಿ ರುಕ್ಮಿಣಿ ತಂಡ, ಯುವತಿ ಮಂಡಳಿ ಅಪರ್ಣ ವಿಶ್ವನಾಥ ತಂಡ, ಇತರೆ ಅಂಗಸಂಸ್ಥೆಗಳ ಪದಾಧಿಕಾರಿಗಳು ಆರ್ಯವೈಶ್ಯ ಕುಲಬಾಂಧವರು ಉಪಸ್ಥಿತರಿದ್ದರು.
