April 16, 2026
2049c87c-7afa-4e51-ad6d-661a44825563

ಹಿರಿಯೂರು :

ಬಾಲ್ಯದಿಂದಲೇ ಅನೇಕ ಸಂಕಷ್ಟಗಳನ್ನು ಎದುರಿಸಿದ ಡಾ.ಬಿ.ಆರ್.ಅಂಬೇಡ್ಕರ್ ಅವರು ತಮ್ಮ ವಿದ್ಯಾಭ್ಯಾಸದ ಮೂಲಕ ಜಗತ್ತಿಗೆ ಮಾದರಿಯಾದರು, ಅವರ ಪರಿಶ್ರಮ ಮತ್ತು ಜ್ಞಾನದಿಂದ ಭಾರತದ ಸಂವಿಧಾನವನ್ನು ರಚಿಸಿ ದೇಶದ ಪ್ರತಿಯೊಬ್ಬ ನಾಗರೀಕರಿಗೂ ಸಮಾನ ಹಕ್ಕುಗಳನ್ನು ನೀಡುವ ಮಹತ್ವದ ಕೆಲಸವನ್ನು ನೆರವೇರಿಸಿದರು ಎಂಬುದಾಗಿ ಬಿಜೆಪಿ ಮಂಡಲ ಅಧ್ಯಕ್ಷರಾದ ಕೆ.ಅಭಿನಂದನ್ ಹೇಳಿದರು.

ನಗರದ ಬಿಜೆಪಿ ಪಕ್ಷದ ಕಚೇರಿಯಲ್ಲಿ ಭಾರತೀಯ ಜನತಾ ಪಾರ್ಟಿ ಹಿರಿಯೂರು ಮಂಡಲದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಡಾ.ಅಂಬೇಡ್ಕರ್ ಅವರು ಸಮಾಜದಲ್ಲಿ ಸಮಾನತೆ ಇರಬೇಕು, ಯಾರಿಗೂ ಅನ್ಯಾಯವಾಗಬಾರದು ಎಂದು ಶಿಕ್ಷಣದ ಮಹತ್ವವನ್ನು ಒತ್ತಿ ಹೇಳಿದವರು, ಶಿಕ್ಷಣ ಪಡೆಯಿರಿ ಸಂಘಟಿತರಾಗಿ ಹೋರಾಡಿರಿ ಎಂಬ ಸಂದೇಶವನ್ನು ನೀಡಿದರು, ನಾವು ಅವರ ಜಯಂತಿಯನ್ನು ಆಚರಿಸುವಾಗ ಅವರ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ಅವರಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ ಎಂಬುದಾಗಿ ಹೇಳಿದರು.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಎಸ್.ಟಿ.ಮೋರ್ಚಾ ಅಧ್ಯಕ್ಷರಾದ ಜೆ.ಪಿ.ರಾಜಣ್ಣ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ನಿತಿನ್ ಗೌಡ ಹಾಗೂ ಯೋಗೇಶ್, ಮುಖಂಡರಾದ ಬಸವರಾಜನಾಯಕ, ಎಸ್.ಸಿ.ಮೋರ್ಚಾ ಅಧ್ಯಕ್ಷರಾದ ಮಂಜುನಾಥ್, ಮಂಜಣ್ಣ, ಪ್ರಜ್ವಲ್, ಪಾರ್ಥ, ವೇದಮೂರ್ತಿ, ವಾಸು, ಏಕಾಂತ್, ಆಸಿಫ್, ವಿಶ್ವನಾಥ್ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *