
ಹಿರಿಯೂರು:
ಪ್ರತಿಭಾ ಪ್ರದರ್ಶನ ಹಾಗೂ ಪದವಿ ಪ್ರಧಾನ ಸಮಾರಂಭವು ಚಿಕ್ಕಮಕ್ಕಳು ತಮ್ಮ ಪ್ರತಿಭೆಗಳನ್ನು ಶಾಲೆಯ ವೇದಿಕೆಯಲ್ಲಿ ತೋರಿಸುವ ಒಂದು ಸಂತೋಷದ ಕಾರ್ಯಕ್ರಮವಾಗಿದೆ. ಇಂತಹ ವೇದಿಕೆಯನ್ನು ಮಕ್ಕಳು ಹಂಚಿಕೊಂಡರೆ ಮುಂದಿನ ದಿನಗಳಲ್ಲಿ ಉತ್ತಮ ಮಟ್ಟಕ್ಕೆ ಏರಲು ಮಕ್ಕಳಲ್ಲಿ ಆಸಕ್ತಿ ಇರುತ್ತದೆ ಎಂಬುದಾಗಿ ಶ್ರೀಮೋಕ್ಷಗುಂಡಮ್ ವಿಶ್ವೇಶರಯ್ಯ ವಿದ್ಯಾಮಂದಿರ ಅಧ್ಯಕ್ಷರಾದ ಎಂ. ಬಸವರಾಜಪ್ಪ ಅವರು ಹೇಳಿದರು.
ನಗರದ ಶ್ರೀ ಮೋಕ್ಷಗುಂಡಮ್ ವಿಶ್ವೇಶರಯ್ಯ ವಿದ್ಯಾಮಂದಿರ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಎಲ್.ಕೆ.ಜಿ ಮತ್ತು ಯು.ಕೆ.ಜಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪ್ರದರ್ಶನ ಹಾಗೂ ಯು.ಕೆ.ಜಿ. ಮಕ್ಕಳಿಗೆ ಪದವಿ ಪ್ರಧಾನ ಸಮಾರಂಭ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈ ರೀತಿಯ ಕಾರ್ಯಕ್ರಮಗಳನ್ನು ಶಾಲೆಗಳಲ್ಲಿ ಯೋಜಿಸುವುದರಿಂದ ಮಕ್ಕಳ ಆತ್ಮವಿಶ್ವಾಸ ಹೆಚ್ಚಿಸುವುದರ ಜೊತೆಗೆ ಮಕ್ಕಳ ಪ್ರತಿಭೆಯನ್ನು ಗುರುತಿಸುವುದು. ಮಕ್ಕಳಿಗೆ ವೇದಿಕೆಯಲ್ಲಿ ಮಾತನಾಡುವ ಧೈರ್ಯ ನೀಡುವುದು ಮಕ್ಕಳಲ್ಲಿ ಸೃಜನಾತ್ಮಕತೆ ಮತ್ತು ಆಸಕ್ತಿ ಬೆಳೆಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂಬುದಾಗಿ ಅವರು ಹೇಳಿದರು.

ಈ ಕಾರ್ಯಕ್ರಮದಲ್ಲಿ ಮಕ್ಕಳಿಂದ ಹಾಡು, ನೃತ್ಯ, ಅಭಿನಯ ಮುಂತಾದವುಗಳನ್ನು ಪ್ರದರ್ಶಿಸಲಾಯಿತು. ವಿದ್ಯಾರ್ಥಿಗಳ ಪದವಿ ಪ್ರಧಾನ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಪುಟ್ಟ ವಿದ್ಯಾರ್ಥಿಗಳು ಪದವಿ ವಸ್ತ್ರ ಧರಿಸಿ ವೇದಿಕೆಗೆ ಬಂದು ತಮ್ಮ ಪದವಿ ಪ್ರಮಾಣಪತ್ರಗಳನ್ನು ಸ್ವೀಕರಿಸಿದರು.
ವಿದ್ಯಾರ್ಥಿಗಳು ನೃತ್ಯ, ಹಾಡು ಹಾಗೂ ಸಣ್ಣನಾಟಕಗಳ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಎಲ್ಲರ ಮನ ಗೆದ್ದರು. ಪೋಷಕರು ಮತ್ತು ಶಿಕ್ಷಕರು ಮಕ್ಕಳ ಸಾಧನೆಯನ್ನು ನೋಡಿ ಸಂತೋಷ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಶಾಲೆಯ ಅಧ್ಯಕ್ಷರಾದ ಎಂ.ಬಸವರಾಜಪ್ಪ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಾಲೆಯ ಕಾರ್ಯದರ್ಶಿ ಹೆಚ್.ಎಂ.ಬಸವರಾಜ್, ಖಜಾಂಚಿ ಸಣ್ಣಭೀಮಣ್ಣ, ನಿರ್ದೇಶಕರುಗಳಾದ ಕೆ.ಆರ್.ವೀರಭದ್ರಯ್ಯ, ರವಿಪ್ರಸಾದ್, ಮುಖ್ಯೋಪಧ್ಯಾಯರಾದ ಜಿ.ತಿಪ್ಪೇಸ್ವಾಮಿ, ಉಪಸ್ಥಿತರಿದ್ದರು.
