April 17, 2026
0003

ಹಿರಿಯೂರು:

ನಗರದ ಪ್ರವಾಸಿ ಮಂದಿರದಲ್ಲಿ ರಾಜ್ಯ ಕಾಡುಗೊಲ್ಲ ಸಂಘದ ವತಿಯಿಂದ  ದೆಹಲಿಯ ಪ್ರತಿಷ್ಠಿತ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ( ಐ.ಎ.ಆರ್.) ಕೃಷಿ ಸಂಶೋಧನೆ ನಡೆಸಿ ಡಾಕ್ಟರೇಟ್ ಆಫ್ ಫಿಲಾಸಫಿ (ಪಿ.ಹೆಚ್.ಡಿ) ಪದವಿ ಪಡೆದ ತಾಲ್ಲೂಕಿನ ಬಾಲೆನಹಳ್ಳಿ ಗ್ರಾಮದ ಕಾಡುಗೊಲ್ಲ ಸಮಾಜದ ಕುಮಾರಿ ಟಿ.ಕಾವ್ಯ ಅವರಿಗೆ ಸನ್ಮಾನಿಸಿ   ಅಭಿನಂದನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಜೆ.ಡಿ.ಎಸ್. ಜಿಲ್ಲಾಧ್ಯಕ್ಷರಾದ ಕೆ.ಮಂಜುನಾಥ್, ರಾಜ್ಯ ಕಾಡುಗೊಲ್ಲ ಸಂಘದ ಅಧ್ಯಕ್ಷರಾದ ರಾಜಣ್ಣ,  ರಾಜ್ಯ ಉಪಾಧ್ಯಕ್ಷ ಮೀಸೆಮಹಾಲಿಂಗಪ್ಪ, ತಾಲ್ಲೂಕು ಅಧ್ಯಕ್ಷರಾದ ವಕೀಲ ಪಿ.ಆರ್.ದಾಸ್, ಕಾಡುಗೊಲ್ಲ ಮುಖಂಡರಾದ ರಂಗಪ್ಪ, ನಗರಸಭೆ  ಮಾಜಿ  ಅಧ್ಯಕ್ಷರಾದ ಶಿವರಂಜಿನಿಯಾದವ್, ಆಲಮರದಹಟ್ಟಿ ಶಿವಣ್ಣ, ವಕೀಲ ನಾಗರಾಜ್, ಚಿತ್ತಪ್ಪ, ಸಿದ್ದೇಶ್, ವೇದಮೂರ್ತಿ, ನಾಗೇಂದ್ರ, ಹಿರಿಯ, ಕಿರಿಯ ಮುಖಂಡರು, ಸಂಘದ ಪದಾಧಿಕಾರಿಗಳು ಹಾಗೂ ಕಾಡುಗೊಲ್ಲ ಬಂಧುಗಳು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *