April 17, 2026
00005

ಹಿರಿಯೂರು :

ಆಗ್ನೇಯ ಪದವೀಧರ ಕ್ಷೇತ್ರದ ಎನ್‌.ಡಿ.ಎ ಅಭ್ಯರ್ಥಿಯಾದ ಕೆ.ಎಂ.ಸುರೇಶ್ ದಾವಣಗೆರೆಯವರು ನಗರದಲ್ಲಿ ರಾಜ್ಯ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತರು ಹಾಗೂ “ಹಿರಿಯೂರುನ್ಯೂಸ್” ತಂಡದ ಮುಖ್ಯಸ್ಥರಾದ ಆಲೂರುಹನುಮಂತರಾಯಪ್ಪ ಅವರನ್ನು ಆತ್ಮೀಯವಾಗಿ ಭೇಟಿ ಮಾಡಿ ಭಗವದ್ಗೀತೆ ಪುಸ್ತಕವನ್ನು ನೀಡುವುದರೊಂದಿಗೆ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬೆಂಬಲ ನೀಡುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಆಲೂರುಹನುಮಂತರಾಯಪ್ಪರವರು ಮಾತನಾಡಿ, ಈ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಆಯ್ಕೆಯಾದರೆ ಪದವೀಧರ ಧ್ವನಿಯಾಗಿ ಅವರ ಸಮಸ್ಯೆಗಳು, ಆಸೆಗಳು ಮತ್ತು ನಿರೀಕ್ಷೆಗಳಿಗೆ ನ್ಯಾಯಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡಿ, ಈ ಕ್ಷೇತ್ರದಲ್ಲಿ ಪದವೀಧರ ಸ್ನೇಹಿತರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುವಂತಾಗಲಿ ಎಂಬುದಾಗಿ ಶುಭಹಾರೈಸಿದರು.

ಇದೇ ಸಂದರ್ಭದಲ್ಲಿ ವಾಣಿವಿಲಾಸ ವಿದ್ಯಾಸಂಸ್ಥೆಗೆ ಆಗಮಿಸಿ, ಬೆಂಬಲ ಕೋರಿದ ಆಗ್ನೇಯ ಪದವೀಧರ ಕ್ಷೇತ್ರದ ಎನ್‌.ಡಿ.ಎ ಅಭ್ಯರ್ಥಿಯಾದ ಕೆ.ಎಂ.ಸುರೇಶ್ ರವರನ್ನು ವಿದ್ಯಾಸಂಸ್ಥೆಯ ವತಿಯಿಂದ ಶಾಲು ಹೊದಿಸಿ, ಸನ್ಮಾನಿಸಿ, ನೆನಪಿನ ಕಾಣಿಕೆ ನೀಡಿ, ಗೌರವಿಸಲಾಯಿತು.

ಈ ಸಂದರ್ಭದಲ್ಲಿ ತಾಲೂಕು ಬಿಜೆಪಿ ಮಂಡಲ ನಿಕಟ ಪೂರ್ವ ಅಧ್ಯಕ್ಷರಾದ ವಿಶ್ವನಾಥ್, ಮತ್ತು ಎಸ್.ಟಿ.ಮೋರ್ಚಾ ಚಿತ್ರದುರ್ಗ ಜಿಲ್ಲಾಧ್ಯಕ್ಷರಾದ ಜೆ.ಬಿ.ರಾಜು,  ಬಿಜೆಪಿ ಮುಖಂಡರುಗಳಾದ ಎಂ.ಎಸ್.ರಾಘವೇಂದ್ರ, ಎಂ.ವಿ.ಹರ್ಷ, ಎ.ರಾಘವೇಂದ್ರಪ್ರಿಂಟಿ, ಪ್ರಧಾನ ಕಾರ್ಯದರ್ಶಿ ಯೋಗೇಶ್,  ಎಸ್.ಎಲ್.ಎನ್.ವೆಂಕಟೇಶ್ ಹಾಗೂ ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕರಾದ ಶ್ರೀಮತಿ ಸೌಮ್ಯ, ವ್ಯವಸ್ಥಾಪಕಿ ಶ್ರೀಮತಿ ವಸಂತಾ, ಶಿಕ್ಷಕರಾದ ಉಮೇಶ್ ಯಾದವ್, ಶಿವರಾಜ್ ನಾಯಕ್, ಶ್ರೀಮತಿ ಭಾಗ್ಯಲಕ್ಷ್ಮೀ, ಕುಮಾರಿ ಪೂಜಾ ಸೇರಿದಂತೆ ಇತರರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *