
ಹಿರಿಯೂರು:
ನಗರದ ಶ್ರೀ ಶಕ್ತಿಕ್ಷೇತ್ರ ನಗರ ದೇವತೆ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಮಂಗಳವಾರ ಸುಮಂಗಲೆಯರಿಂದ ಅಮ್ಮನವರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಆರತಿಸೇವೆ ಹಲವಾರು ಭಕ್ತರ ಸಮ್ಮುಖದಲ್ಲಿ ಭಕ್ತಿ-ಭಾವದಿಂದ ನೆರವೇರಿಸಲಾಯಿತು.
ಇದರ ಅಂಗವಾಗಿ ನಗರದ ಸುಮಂಗಲೆಯರು ದುರ್ಗಾಪರಮೇಶ್ವರಿ ದೇವರಿಗೆ ಮಡ್ಲಕ್ಕಿ ನೀಡಿ ಆರತಿ ಬೆಳಗಿದರು. ದುರ್ಗಾಪರಮೇಶ್ವರಿ ದೇವತೆಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
ದುರ್ಗಾಪರಮೇಶ್ವರಿ ದೇವತೆಗೆ ವಿಶೇಷ ಅಲಂಕಾರ ಮಾಡಲಾಗಿತ್ತು ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ನಡೆಯಿತು. ಸಹಸ್ರಾರು ಭಕ್ತರು ಈ ಪೂಜಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
