
ಹಿರಿಯೂರು:
ಹೆಣ್ಣು ಜವಬ್ದಾರಿ ನಿಭಾಯಿಸುವ ನಿರಂತರ ಕಾಯಕಯೋಗಿ, ದಿನದ 24ಗಂಟೆಗಳಲ್ಲಿ ಹೆಚ್ಚು ಕಮ್ಮಿ ಬರಾಬರಿ20ಗಂಟೆ ಕಾಯಕ ಮಾಡುವಅರ್ಧನಾರಿ. ಗಂಡಿನಅರ್ಧ ಶಕ್ತಿ ಮತ್ತು ತನ್ನ ಪೂರ್ಣ ಶಕ್ತಿ ಮೈಗೂಡಿಸಿಕೊಂಡು ನಿರಂತರ ಸೇವಾಮೂರ್ತಿಯಾಗಿ ನಿಂತಿದ್ದಾಳೆ ಎಂಬುದಾಗಿ ಶ್ರೀ ಬಸವ ಹರಳಯ್ಯ ಸ್ವಾಮೀಜಿ ಅವರು ಹೇಳಿದರು.
ತಾಲ್ಲೂಕಿನ ಶ್ರೀಮಹಾಶಿವಶರಣ ಹರಳಯ್ಯ ಗುರುಪಿಠ ಐಮಂಗಲ ಹಾಗೂ ಶ್ರೀ ಮಹಾಶಿವಶರಣ ಹರಳಯ್ಯ ಶಿಕ್ಷಣಸಂಸ್ಥೆಯ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿವಯೋಗಿ ಸಿದ್ಧರಾಮೇಶ್ವರರು ತಮ್ಮ ವಚನದಲ್ಲಿ ಹೀಗೆ ಹೇಳುತ್ತಾರೆ. ಹೆಣ್ಣು ಹೆಣ್ಣಲ್ಲ. ಹೆಣ್ಣು ರಕ್ಕಸಿಯಲ್ಲ. ಹೆಣ್ಣು ಸಾಕ್ಷಾತ್ ಕಪಿಲಸಿದ್ದಮಲ್ಲಿಕಾರ್ಜುನೆಂದು ಅಂದರೆ ಶಿವಸ್ವರೂಪಿಣಿ ಈ ಹೆಣ್ಣಿನ ಬಗ್ಗೆ ಜ್ಞಾನ ನಿಧಿ ಅಲ್ಲಮಪ್ರಭುದೇವರು ಹೀಗೆ ಹೇಳುತ್ತಾರೆ.

ಹೆಣ್ಣುಮಾಯೆ ಎಂಬರು ಹೆಣ್ಣು ಮಾಯೆಯಲ್ಲ, ಹೊನ್ನುಮಾಯೆ ಎಂದರು. ಹೊನ್ನುಮಾಯೆಯಲ್ಲ. ಮನದ ಮುಂದಣ ಆಸೆಯೇ ಕಾಣಾಗುಹೇಶ್ವರ ಎಂದು, ಅಪ್ಪ ಬಸವಣ್ಣ ಜಗತ್ತಿಗೆ ಪರಿಚಯವಾಗಿದ್ದು, ಹೆಣ್ಣಿನಿಂದ ಬುದ್ಧಜಗತ್ತಿಗೆ ಪರಿಚಯವಾಗಿದ್ದು, ಹೆಣ್ಣಿನೀಂದ ಪುರಂದರದಾಸರು ಪರಿಚಯವಾದದ್ದು, ಹೆಣ್ಣಿನೀಂದ ಯಾವುದೇ ಮಹನೀಯರ ಸಾಧನೆಗೆ ಹೆಣ್ಣೇ ಕಾರಣ.
ಇದೇ ಸಂದರ್ಭದಲ್ಲಿ ಪಿ.ಟಿ.ಉಷಾ, ಗಗನಯಾತ್ರಿ ಇಂದಿನ ಮೆಟ್ರೋರೈಲಿನ ಚಾಲಕರು, ಮದರ್ ತೇರೇಸ, ರಮಾಭಾಯಿ ಅಂಬೇಡ್ಕರ್, ಸುನೀತಾವಿಲಿಯಂ, ಸರೋಜಿನಿ ನಾಯ್ಡು, ಇಂದಿರಾಗಾಂಧೀ ಮುಂತಾದವರಿಗೆ ಸ್ಮರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ನಂದಿನಿ, ಜಯಶೀಲ, ರಕ್ಷಿತಾ, ಆಯೆಶಾ ಬಾನು, ಶ್ರುತಿ ಸೇರಿದಂತೆ ಅನೇಕರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
