April 18, 2026
0002

ಹಿರಿಯೂರು:

ಕಾಡುಗೊಲ್ಲರ ಸಾಂಪ್ರದಾಯಿಕ ಆಚರಣೆಗಳನ್ನು ಮುಂದುವರೆಸುವ ಜೊತೆಗೆ ಯುವಪೀಳಿಗೆ ಆಚರಣೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಬೇಕು ಎಂಬುದಾಗಿ ಕಾಡುಗೊಲ್ಲ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ  ಹಾರೋಗೆರೆಮಹೇಶ್ ಅವರು ಹೇಳಿದರು.

ತಾಲ್ಲೂಕಿನ ಕೆ.ಆರ್.ಹಳ್ಳಿ ಗ್ರಾಮದಲ್ಲಿ ನಡೆದ ಶ್ರೀಗೊಲ್ಲಹಳ್ಳೇಶ್ವರಿ ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಿ ದೇವರ ದರ್ಶನ ಪಡೆದು ಅವರು ಮಾತನಾಡಿದರು.

ಕಾಡುಗೊಲ್ಲರು ವಿಶಿಷ್ಠ ಆಚರಣೆ ಹೊಂದಿದ್ದು,  ನೆಲಮೂಲ ಸಂಸ್ಕೃತಿಯನ್ನು ಉಳಿಸುವ ಕೆಲಸವಾಗಬೇಕು. ಮಕ್ಕಳಿಗೆ ಶಿಕ್ಷಣ ಕೊಡಿಸುವ  ಮೂಲಕ ಶಿಕ್ಷಣವೇ ಆಸ್ತಿಯನ್ನಾಗಿ ಮಾಡಬೇಕು. ಕಾಡುಗೊಲ್ಲ ಸಮುದಾಯ ಸಂಘಟಿತರಾಗಿ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು.  ಎಂದರು.  

ಗೊಲ್ಲರಹಟ್ಟಿಗಳು ಇನ್ನಷ್ಟು ಬದಲಾವಣೆ ಆಗಬೇಕಾಗಿದೆ ಈಗಾಗಲೇ ಸರ್ಕಾರ ಚಿತ್ರದುರ್ಗ ಹಾಗೂ ತುಮಕೂರು ಸೇರಿದಂತೆ ಇನ್ನಿತರ ಭಾಗಗಳಲ್ಲಿ  ಗೊಲ್ಲರಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಣೆ ಮಾಡಿದೆ.. ಎಂದರಲ್ಲದೆ,

ರಾಜ್ಯದ ಎಲ್ಲಾ ಕಾಡುಗೊಲ್ಲರ ಹಟ್ಟಿಗಳಿಗೆ  ಭೇಟಿ ನೀಡಿ, ಪರಿಶೀಲನೆ ನಡೆಸಿ, ಸಮಸ್ಯೆಗಳನ್ನು ಪಟ್ಟಿ ಮಾಡಿ  ಉಳಿದ ಗೊಲ್ಲರಹಟ್ಟಿಗಳನ್ನು  ಕಂದಾಯ ಗ್ರಾಮಗಳನ್ನಾಗಿ  ಮಾಡಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿ  ಮನವಿ ಮಾಡಲಾಗುವುದು. ಕಾಡಗೊಲ್ಲಅಭಿವೃದ‍್ಧಿ ನಿಗಮದ ಸಿಗುವ ಗಂಗಾ ಕಲ್ಯಾಣ ಯೋಜನೆ, ನೆರಸಾಲ ಸೇರಿದಂತೆ ಸಬ್ಸಿಡಿ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ  ನೀಡಲಾಗುವು ಎಂಬುದಾಗಿ ಅವರು ಹೇಳಿದರು.

ಈ ಸಂದರ್ಭದಲ್ಲಿ ನಗರಸಭೆ ಮಾಜಿ ಉಪಾಧ್ಯಕ್ಷರಾದ ಆರ್.ರವಿಚಂದ್ರ ನಾಯಕ್, ಜೆ.ಜೆ.ಹಳ್ಳಿ ಸಂಘದಅಧ್ಯಕ್ಷರಾದ ಕೆ.ಆರ್.ಹಳ್ಳಿ ರವಿ, ಮಾಜಿ ಗ್ರಾಮಪಂಚಾಯಿತಿ ಅಧ್ಯಕ್ಷರಾದ ಸುರೇಶ್, ಮುಖಂಡರುಗಳಾದ ಮೇಕೆ ಚಿಕ್ಕಣ್ಣ, ಟಿ.ರಂಗನಾಥ್, ರಾಜಪ್ಪ, ಮಹಾಲಿಂಗಪ್ಪ, ಸತೀಶ್, ಸಣ್ಣಪ್ಪ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *