April 17, 2026
000004

ಹಿರಿಯೂರು:

ದೇಶದಲ್ಲಿ ಪುರುಷರಷ್ಟೇ ಮಹಿಳೆಯರಿಗೆ ಹಕ್ಕುಗಳು, ಸೌಲಭ್ಯಗಳು, ಉದ್ಯೋಗವಕಾಶಗಳು ದೊರೆಯಬೇಕು ಎಂಬುದಾಗಿ ನಗರಸಭೆ ಮಾಜಿ ಅಧ್ಯಕ್ಷೆಯಾದ ಶ್ರೀಮತಿ ಎಸ್. ಶಿವರಂಜಿನಿಯಾದವ್  ಅವರು ಹೇಳಿದರು.

ಪಟ್ಟಣದ ವೇದಾವತಿ ನಗರದ ಶ್ರೀಕೃಷ್ಣ ದೇವಸ್ಥಾನದ ಆವರಣದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ವೇದಿಕೆ ತಾಲ್ಲೂಕು ಘಟಕ, ಶ್ರೀ ಏಕನಾಥೇಶ್ವರಿ ಸಂಗೀತ ಮಹಾವಿದ್ಯಾಲಯ ಹಾಗೂ ಶ್ರೀ ಕೃಷ್ಣ ದೇವಸ್ಥಾನ ಸಮಿತಿ ಹಿರಿಯೂರು ಇವರುಗಳ ಸಂಯುಕ್ತಾಶ್ರಯದಲ್ಲಿ  ಹಮ್ಮಿಕೊಳ್ಳಲಾಗಿದ್ದಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಸ್ತಳೀಯ ಸರ್ಕಾರ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಶೇಕಡ33ರಷ್ಟು ಮೀಸಲಾತಿ ವ್ಯವಸ್ಥೆಯಿದ್ದು, ವಿಧಾನಸಭೆ, ವಿಧಾನಪರಿಷತ್, ರಾಜ್ಯಸಭೆ, ಲೋಕಸಭೆಗಳಲ್ಲಿ  ಮಹಿಳೆಯರಿಗೆ ಸಮಾನ ಅವಕಾಶಗಳು ದೊರೆಯಬೇಕು ಎಂಬುದಾಗಿ ಅವರು ಹೇಳಿದರು.

ಎಸ್.ಜಿ.ರಂಗಸ್ವಾಮಿ ಸಕ್ಕರ ಅವರು ಮಾತನಾಡಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಶತಮಾನೋತ್ಸವ ಕಂಡಿದ್ದು, ಪ್ರಾಚೀನ  ಕಾಲದಲ್ಲಿ ಮಹಿಳೆಯರು  ಸತಿಪದ್ಧತಿ, ಬಾಲ್ಯವಿವಾಹ, ದೇವದಾಸಿಪದ್ಧತಿ, ಬೆತ್ತಲೆಸೇವೆ, ವರದಕ್ಷಿಣೆ ಕಿರುಕುಳ, ಲಿಂಗತಾರತಮ್ಯ ಹೀಗೆ ಹಲವಾರು  ಸಮಸ್ಯೆಗಳಿಂದ ಬಳಲುತ್ತಿದ್ದರು.ಈಗ ಹೆಣ್ಣುಮಕ್ಕಳ ಅಪಹರಣ ಮತ್ತು ಮಾರಾಟ ಕೌಟುಂಬಿಕ ಹಿಂಸೆ ಸ್ವ;ಲ್ಪ ಕಡಿಮೆಯಾಗಿದೆ.

ಮಹಿಳೆಯರು ಸ್ವಾವಲಂಬಿ ಬದುಕನ್ನು ಕಟ್ಟಿಕೊಂಡ ನಂತರ ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕ, ವಿಜ್ಞಾನ ಮತ್ತು ತಂತ್ರಜ್ಞಾನ, ರಕ್ಷಣೆ, ಚಲನಚಿತ್ರ,  ಪತ್ರಿಕಾ ಮಾಧ್ಯಮ ಹೀಗೆ ವಿವಿಧ ರಂಗಗಳಲ್ಲಿ ಅಭಿವೃದ್ಧಿಯನ್ನು ಸಾಧಿಸಿ ಪುರುಷರು ಸಬಲರು ಎಂಬುದನ್ನು ಸಾಧನೆ ಮಾಡಿ ತೋರಿಸಿದ್ದಾರೆ ಎಂಬುದಾಗಿ ಅವರು ಹೇಳಿದರು.

ತಾಲ್ಲೂಕು ಮಕ್ಕಳ  ಸಾಹಿತ್ಯ ವೇದಿಕೆ ಗೌರಾವಧ್ಯಕ್ಷರಾದ ಆಲೂರು ಹನುಮಂತರಾಯಪ್ಪ ಅವರು ಮಾತನಾಡಿ ತೊಟ್ಟಿಲ ತೂಗುವ ಕೈ ದೇಶವನ್ನಾಳುತ್ತದೆ ಎಂಬ ಮಾತಿನಂತೆ ದೇಶದಲ್ಲಿ ಮಹಿಳೆಯರು ಪ್ರಧಾನಮಂತ್ರಿಯಾಗಿ,  ರಾಷ್ಟ್ರಪತಿಯಾಗಿ, ರಾಜ್ಯಪಾಲರಾಗಿ, ಮುಖ್ಯಮಂತ್ರಿಗಳಾಗಿ, ಆಳ್ವಿಕೆಯನ್ನು ಮಾಡಿದ್ದಾರೆ.

ಒಂದು ಕಾಲದಲ್ಲಿ  ಮನೆಯ ಮಕ್ಕಳು ಲಾಲನೆ, ಪಾಲನೆ ಮಾಡಿ ಸುಮ್ಮನಿದ್ದ  ಸ್ತ್ರೀಯರು ರೂಢಿ, ಸಂಪ್ರದಾಯ, ಕಂದಚಾರಗಳನ್ನು   ಬದಿಗೊತ್ತಿ, ಶಿಕ್ಷಣ ಕಲಿತು ಇಂದು ಎಲ್ಲಾ ರಂಗದಲ್ಲೂ  ಮಹಿಳೆಯರು  ಸಾಧನೆಯನ್ನು ಮಾಡಿದ್ದಾರೆ. ಅವರ ಬದುಕು ಬೇರೆಯವರಿಗೆ ಮಾದರಿಯಾಗಿದೆ ಎಂಬುದಾಗಿ ಅವರು ಹೇಳಿದರು.

ತಾಲ್ಲೂಕು ಮಕ್ಕಳ ಸಾಹಿತ್ಯ ವೇದಿಕೆ  ಅಧ್ಯಕ್ಷರಾದ ಜೆ.ನಿಜಲಿಂಗಪ್ಪಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಕೆ.ಆರ್.ಉಮಾದೇವಿ, ಹೆಚ್.ವೇದಪುಷ್ಪ, ಎಸ್.ಮಂಜುಳಾ, ಗೊಲ್ಲಹಳ್ಳಿ ಲಲಿತಮ್ಮ, ಪಿ.ಹೆಚ್.ಡಿ. ಪದವಿಧರೆ ಡಾ.ಕಾವ್ಯಬಾಲೆನಹಳ್ಳಿ ಇವರುಗಳನ್ನು ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಆರ್.ತಿಪ್ಪೇಸ್ವಾಮಿ,  ವಿನೋದ್, ಎಂ.ಬಿ.ಲಿಂಗಪ್ಪ, ಎಸ್.ನಾಗಸಂದ್ರಮ್ಮ, ಸುಬ್ಬಣ್ಣಶೆಟ್ಟಿ, ಬಿ.ಟಿ.ಶಂಕರ್ ಲಿಂಗಯ್ಯ, ಹೆಚ್.ಎಸ್.ಚಂದ್ರವದನ,  ಟಿ.ಸುಲೋಚನಾ, ಎಸ್.ಶಿವಲೀಲಾ, ಹೆಚ್.ಸಿ.ದಿವುಶಂಕರ್, ಬಿ.ಸಿದ್ಧಪ್ಪ, ಡಿಂಪಲ್  ಜಿ.ಪಾಪಣ್ಣ,  ಮುನಿಸ್ವಾಮಿ, ಡಿ.ದಾಸಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *