March 5, 2026
0003

ಹಿರಿಯೂರು:

ನ್ಯಾಯಬೆಲೆ ಅಂಗಡಿಗಳಲ್ಲಿ  ಪಡಿತರ ಸಿಗುತ್ತಿಲ್ಲ, ನಮ್ಮ ಬಿ.ಪಿ.ಎಲ್. ಕಾರ್ಡ್ ರದ್ದುಪಡಿಸಲಾಗಿದೆ, ಎಂಬುದಾಗಿ ಹೇಳಿಕೊಂಡು ನಿತ್ಯವೂ ಹತ್ತಾರು ಜನ ನನ್ನ ಬಳಿಗೆ ಬರುತ್ತಿದ್ದಾರೆ, ಯಾವುದೇ ಕಾರಣಕ್ಕೂ ಅರ್ಹ ಫಲಾನುಭವಿಗಳ ಬಿ.ಪಿ.ಎಲ್. ಪಡಿತರ ಚೀಟಿಯನ್ನು ರದ್ದು ಮಾಡಬಾರದು ಎಂಬುದಾಗಿ ಜಿಲ್ಲಾ ಉಸ್ತುವಾರಿ ಸಚಿಬವರಾದ ಡಿ.ಸುಧಾಕರ್ ಅವರು ಆಹಾರ ಇಲಾಖೆ ಅಧಿಕಾರಿಗಳಿಗೆ  ಸೂಚಿಸಿದರು.

ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ, ನಂತರ  ಅವರು ಮಾತನಾಡಿದರು.

ವಿಧವಾವೇತನ, ವೃದ್ಧಾಪ್ಯವೇತನ, ಸಂಧ್ಯಾಸುರಕ್ಷಾ, ಗೃಹಲಕ್ಷ್ಮೀ, ಯುವನಿಧಿ ಯೋಜನೆಗಳ ಪ್ರಯೋಜನ ದೊರೆಯುತ್ತಿಲ್ಲ ಎಂಬುದಾಗಿ ಫಲಾನುಭವಿಗಳು  ನನ್ನ ಬಳಿ  ಬರುತ್ತಿದ್ದಾರೆ.  ಆಯಾ ಇಲಾಖೆ ಅಧಿಕಾರಿಗಳೇ  ಜವಬ್ದಾರಿಯಿಂದ ಜನರ ಕೆಲಸಗಳನ್ನು ಮಾಡಿಕೊಡಬೇಕು ಎಂಬುದಾಗಿ ಅವರು ಹೇಳಿದರು.

ರಸ್ತೆ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆಗಳನ್ನು ನಾನು ಬಗೆಹರಿಸಬಹುದು, ಆದರೆ ಜಮೀನು ವಿವಾದವನ್ನು ನಮ್ಮ ಬಳಿ ತಂದರೆ ಹೇಗೆ ಬಗೆಹರಿಸಲಿ ಎಂಬುದಾಗಿ ಸಚಿವರು ಅಸಹಾಯಕತೆ ವ್ಯಕ್ತಪಡಿಸಿದರಲ್ಲದೆ, ಆರೋಗ್ಯ ತಪಾಸಣೆ, ಮಕ್ಕಳ ಓದಿಗೆ ನೆರವು ಕೋರಿ ಬಂದ ಕೆಲವರಿಗೆ  ಸ್ಥಳದಲ್ಲಿಯೇ ಪರಿಹಾರ ನೀಡಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿರಮೇಶ್ ಸೇರಿದಂತೆ ಕಾಂಗ್ರೆಸ್ ಮುಖಂಡರು, ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *